ಭಾನುವಾರ, ಆಗಸ್ಟ್ 25, 2019
20 °C

ಶಾರುಕ್‌ಗೆ ಆ್ಯಕ್ಷನ್‌ ಸಿನಿಮಾ ಮಾಡುವಾಸೆ

Published:
Updated:
Prajavani

‘ಕಿಂಗ್ ಆಫ್‌ ರೊಮ್ಯಾನ್ಸ್‌’ ಎಂದೇ ಕರೆಸಿಕೊಳ್ಳುವ ಶಾರುಕ್‌ ಖಾನ್‌, ಆ್ಯಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ. ಇತ್ತೀಚೆಗೆ ಅವರಿಗೆ ಇನ್ನೂ ಹೆಚ್ಚಿನ ಸವಾಲಿನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ತುಡಿತ ಹೆಚ್ಚಿದೆಯಂತೆ.

ಸಿನಿಮಾಗಳಿಂದ ಸ್ವಲ್ಪ ಬಿಡುವು ಪಡೆದುಕೊಂಡಿರುವ ಶಾರುಕ್‌, ಈಗ ಆಸ್ಟ್ರೇಲಿಯಾದಲ್ಲಿ ತಮ್ಮ ಬ್ಯುಸಿನೆಸ್‌ಗೆ ಸಂಬಂಧಿಸಿದ ಕೆಲಸಗಳನ್ನು ಮುಗಿಸುತ್ತಿದ್ದಾರಂತೆ. ಈ ಮಧ್ಯೆ ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಓದಿದ್ದಾರೆ. ಆದರೆ ಮಾಡಲೇಬೇಕು ಎನಿಸಿದ ಪಾತ್ರ ಸಿಕ್ಕಿಲ್ಲವಂತೆ. ಸಿನಿಮಾ ನಿರ್ಮಾಣ ಮಾಡುವ ಕುರಿತು ಯೋಚಿಸುತ್ತಿರುವ ಶಾರುಕ್‌ ಅತ್ಯುತ್ತಮವಾದ ಸ್ಕ್ರಿಪ್ಟ್‌ ನಿರೀಕ್ಷೆಯಲ್ಲಿದ್ದಾರೆ. ಆ್ಯಕ್ಷನ್‌ ಜೊತೆಗೆ ತಮಾಷೆಯ ಸನ್ನಿವೇಶಗಳು ಇರುವ ಸಿನಿಮಾ ಮಾಡುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ. ನಟನೆಗಿಂತ ನಿರ್ಮಾಣದ ಕಡೆಗೆ ನನ್ನ ಒಲವು ಹೆಚ್ಚಿದೆ ಎಂದಿದ್ದಾರೆ.

‘ಹಿಂದಿನ ಕೆಲವು ವರ್ಷಗಳಲ್ಲಿ ಒಂದೇ ರೀತಿಯ ಪಾತ್ರಗಳು ಇರುವ ಸಿನಿಮಾಗಳನ್ನು ಮಾಡಿದ್ದೇನೆ. ಮುಂದಿನ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಲಿದ್ದೇನೆ’ ಎಂದು ಹೇಳಿದ್ದಾರೆ. v

 

Post Comments (+)