ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ಫ್ಲಿಕ್ಸ್‌ ಸರಣಿಯಲ್ಲಿ ಶಾರುಕ್‌

Last Updated 20 ಆಗಸ್ಟ್ 2019, 14:31 IST
ಅಕ್ಷರ ಗಾತ್ರ

ನೆಟ್‌ಫ್ಲಿಕ್ಸ್‌ ಸರಣಿ ‘ಬಾರ್ಡ್‌ ಆಫ್‌ ಬ್ಲಡ್‌’ನಲ್ಲಿ ನಟ ಶಾರುಕ್‌ ಖಾನ್‌ ಬೇಹುಗಾರಿಕಾ ಸಂಸ್ಥೆಯ ಅಧಿಕಾರಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತೀಯ ಬೇಹುಗಾರಿಕಾ ಅಧಿಕಾರಿಗಳ ಕಥೆಯನ್ನು ಆಧರಿಸಿದ ಕಥೆ ಇದಾಗಿದೆ. ಬೇಹುಗಾರಿಕೆ ಸಂಸ್ಥೆಯ ಉದ್ಯೋಗ ಅಧಿಕಾರಿ ಪಾತ್ರದಲ್ಲಿಎಸ್‌ಆರ್‌ಕೆ ಕಾಣಿಸಿಕೊಳ್ಳುತ್ತಿದ್ದಾರೆ.

ಶಾರುಕ್‌ ವೃತ್ತಿ ಜೀವನದ ಅತ್ಯಂತ ಸವಾಲಿನ ಪಾತ್ರ ಇದಾಗಿದೆ ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ. ಬಹುತೇಕ ಎಲ್ಲ ಬಗೆಯ ಪಾತ್ರಗಳಲ್ಲಿ ನಟಿಸಿರುವ ಶಾರುಕ್‌ ಬಹಳ ವರ್ಷಗಳಿಂದ ಇಂಥದೊಂದು ಪಾತ್ರಕ್ಕಾಗಿ ಕಾಯುತ್ತಿದ್ದರು. ‘ಬಾಲಿವುಡ್‌ ಚಿತ್ರದಲ್ಲಿ ಇಂತದೊಂದು ಪಾತ್ರದಲ್ಲಿ ನಟಿಸುವುದು ನನ್ನ ಬಹು ದಿನಗಳ ಕನಸಾಗಿತ್ತು. ನೆಟ್‌ಫ್ಲಿಕ್ಸ್‌ ಸರಣಿ ಮೂಲಕ ಅದು ನನಸಾಗುತ್ತಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಭಾರತೀಯ ಬೇಹುಗಾರಿಕೆ ಸಂಸ್ಥೆ ‘ರಾ’ ಮಾಜಿ ಅಧಿಕಾರಿ ಕಬೀರ್‌ ಆನಂದ ಜೀವನದ ಸುತ್ತ ಕಥೆ ಗಿರಕಿ ಹೊಡೆಯುತ್ತದೆ. ನಟ ಇಮ್ರಾನ್ ಹಷ್ಮಿ ಈ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಿಂದಿ, ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಎಂಟು ಕಂತುಗಳಲ್ಲಿ ‘ಬಾರ್ಡ್‌ ಆಫ್‌ ಬ್ಲಡ್‌’ ಪ್ರಸಾರವಾಗಲಿದೆ. ಶಾರುಕ್‌ ಅಭಿನಯದ ಟೀಸರ್‌ ಅನ್ನು ನೆಟ್‌ಫ್ಲಿಕ್ಸ್‌ ಬಿಡುಗಡೆ ಮಾಡಿದೆ. ಸೆಪ್ಟೆಂಬರ್‌ 27ರಂದು ಪ್ರೀಮಿಯರ್‌ ಶೋ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT