ಶುಕ್ರವಾರ, ಮಾರ್ಚ್ 31, 2023
23 °C

ವಿಡಿಯೊ ನೋಡಿ: 'ಶೇರ್‌ಶಾ'ದ ಕಿಯಾರಾ ಅಡ್ವಾಣಿಯಂತೆ ಕಣ್ಣೀರು ತರಿಸಿದ 9ರ ಬಾಲೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್ಗಿಲ್ ಯುದ್ಧದ ಹುತಾತ್ಮನ ಕಥೆ ಆಧರಿಸಿ ಇತ್ತೀಚೆಗೆ ಬಿಡುಗಡೆಯಾಗಿರುವ ‘ಶೇರ್‌ಶಾ‘ ಬಾಲಿವುಡ್ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದರಲ್ಲಿ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಪಾತ್ರದಲ್ಲಿ ಸಿದ್ದಾರ್ಥ ಮಲ್ಹೊತ್ರಾ ಅಭಿನಯಿಸಿದರೆ, ಡಿಂಪಲ್ ಚೀಮಾ ಪಾತ್ರದಲ್ಲಿ ಕಿಯಾರಾ ಅಡ್ವಾಣಿ ಅಭಿನಯಿಸಿದ್ದಾರೆ. ಅದರಲ್ಲೂ ಕಿಯಾರಾ ಅವರ ಅಭಿನಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. 

ವಿಕ್ರಮ್ ಬಾತ್ರಾ ಅಂತ್ಯಸಂಸ್ಕಾರದ ವೇಳೆ (ಚಿತ್ರದಲ್ಲಿ ಬರುವ ಸನ್ನಿವೇಶ) ಕಿಯಾರಾ ಅಳುವ ದೃಶ್ಯವಂತೂ ಹಲವರಲ್ಲಿ ಕಣ್ಣೀರು ತರಿಸುತ್ತಿದೆ. ಈಗ ಇದೇ ದೃಶ್ಯವನ್ನು ಅನುಕರಿಸಿ ಬಾಲೆಯೊಬ್ಬಳು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಶೇರ್ ಮಾಡಿಕೊಂಡಿದ್ದು, ಬಾಲೆಯ ನಟನೆಯೂ ಕೂಡ ಕಿಯಾರಾ ಅವರನ್ನು ಮೀರಿಸುವಂತಿದೆ.

ಈ  ದೃಶ್ಯ ನೋಡಿರುವ ನೆಟ್ಟಿಗರು ‘ನೀನು ಸಹ ನಮ್ಮ ಕಣ್ಣಲ್ಲಿ ನೀರು ತರಿಸಿದೆ‘ ಎಂದು ಕಾಮೆಂಟ್ ಮಾಡಿದ್ದಾರೆ. ಕಿಯಾರಾ ಖನ್ನಾ ಎನ್ನುವ 9 ವರ್ಷದ ಬಾಲಕಿ ಈ ವಿಡಿಯೊ ಮಾಡಿದ್ದಾಳೆ.

ಇದನ್ನೂ ಓದಿ: ಮಾಲ್ಡೀವ್ಸ್ ಬೀಚ್‌ನಲ್ಲಿ ಕಾಣಿಸಿಕೊಂಡ ನಟಿ ಸನ್ನಿ ಲಿಯೋನ್!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು