ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲ್ಪಾ ನನ್ನ ಇಷ್ಟದೇವತೆ

ಶಿಲ್ಪಾ ಶೆಟ್ಟಿ ಹುಟ್ಟುಹಬ್ಬ
Last Updated 10 ಜೂನ್ 2019, 19:30 IST
ಅಕ್ಷರ ಗಾತ್ರ

ಕರಾವಳಿ ಬೆಡಗಿ ಶಿಲ್ಪಾಶೆಟ್ಟಿ ಈಚೆಗಷ್ಟೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. ಪತಿ ರಾಜ್‌ಕುಂದ್ರಾ ತಮ್ಮ ಪ್ರೀತಿಯ ಪತ್ನಿಗೆ ಇನ್‌ಸ್ಟಾಗ್ರಾಂನಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಶಿಲ್ಪಾ ತಮ್ಮ ಜೀವನದಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸಿದ್ದಾಳೆ ಎಂಬುದನ್ನು ರಾಜ್ ಕುಂದ್ರಾ ಸಣ್ಣ ವಿಡಿಯೊ ಮತ್ತು ಚಿತ್ರಗಳ ಮೂಲಕ ಹಂಚಿಕೊಂಡಿದ್ದಾರೆ.

ಕಡುನೀಲಿ ಬಣ್ಣದ ಸಣ್ಣ ಉಡುಪೊಂದನ್ನು ತೊಟ್ಟಿರುವ ಶಿಲ್ಪಾ, ನೀಲಿ ಶರ್ಟ್ ತೊಟ್ಟ ರಾಜ್‌ಕುಂದ್ರಾ ಜೊತೆಗೆ ಕೈಕೈ ಹಿಡಿದುಕೊಂಡು ಸಾಗುತ್ತಿರುವ ಚಿತ್ರ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲ ಪತ್ನಿಗಾಗಿ ರಾಜ್‌ ಬರೆದಿರುವ ಸಾಲುಗಳು ಮೋಹಕವಾಗಿವೆ.

‘ದೇವರಿಗೆ ಧನ್ಯವಾದ. ಇಂದು ನನ್ನ ಇಷ್ಟದೇವತೆ ಹುಟ್ಟಿದ ದಿನ. ನನ್ನ ಜೀವನದ ಪಯಣವನ್ನೊಮ್ಮೆ ಹಿಂತಿರುಗಿ ನೋಡಿದಾಗ, ನನ್ನ ಇಷ್ಟದೇವತೆಯನ್ನು ಒದಗಿಸಿದ್ದಕ್ಕಾಗಿ ದೇವರಿಗೆ ಧನ್ಯವಾದ ಹೇಳಬಯಸುತ್ತೇನೆ. ನಿಜಕ್ಕೂ ನಾನು ಅದೃಷ್ಟವಂತ. ಅವಳನ್ನು ನಾನು ಎಷ್ಟು ಪ್ರೀತಿಸುತ್ತೇನೆಂದು ಅಭಿವ್ಯಕ್ತಿಪಡಿಸಲಾಗದು. ಶಿಲ್ಪಾಶೆಟ್ಟಿ ನಿನಗೆ ಹುಟ್ಟುಹಬ್ಬದ ಶುಭಾಶಯಗಳು. ನಿನ್ನೆಲ್ಲಾ ಕನಸುಗಳು ನನಸಾಗಲಿ ಡಾರ್ಲಿಂಗ್! ಆರೋಗ್ಯಕರ ಮತ್ತು ಸಂತಸದ ಜೀವನಶೈಲಿಯ ಮುಂದೆ ವಯಸ್ಸಿನ ಆಟ ನಡೆಯದು ಎಂದು ನೀನು ತೋರಿಸಿಕೊಟ್ಟಿದ್ದೀಯಾ. ನಮ್ಮೆಲ್ಲರ ಸ್ಫೂರ್ತಿ ನೀನು. ಧನ್ಯವಾದಗಳು’ ಎಂದು ರಾಜ್‌ ಕುಂದ್ರಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದೇ ನವೆಂಬರ್‌ಗೆ ಶಿಲ್ಪಾ ಮತ್ತು ರಾಜ್ ಮದುವೆಯಾಗಿ 10 ವರ್ಷಗಳಾಗುತ್ತವೆ. ಸಿನಿಮಾ ಮಾಡಿ ಬಹಳ ವರ್ಷಗಳೇ ಆಗಿದ್ದರೂ ಶಿಲ್ಪಾ ಇಂದಿಗೂ ತನ್ನ ಅಭಿಮಾನಿಗಳೊಂದಿಗೆ ನಂಟು ಹೊಂದಿದ್ದಾರೆ. ತಮ್ಮದೇ ಆದ ಅಡುಗೆ ಕಾರ್ಯಕ್ರಮ ನಡೆಸುವ ಶಿಲ್ಪಾ, ಖಾಸಗಿ ವಾಹಿನಿಯೊಂದರಲ್ಲಿ ಮಕ್ಕಳ ನೃತ್ಯಸ್ಪರ್ಧೆಯಲ್ಲಿ ಗೀತಾ ಕಪೂರ್ ಮತ್ತು ಅನುರಾಗ್ ಬಸು ಅವರೊಂದಿಗೆ ತೀರ್ಪುಗಾರ್ತಿ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT