ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗದಿಂದ ವಯಸ್ಸು ಹಿಂದೆ ಸರಿಯುತ್ತಿದೆ

Last Updated 23 ಜೂನ್ 2019, 19:45 IST
ಅಕ್ಷರ ಗಾತ್ರ

ವಿಪರೀತವಾಗಿ ಕಾಡುತ್ತಿದ್ದ ಕತ್ತು ನೋವು ನಿವಾರಣೆಗೆ18 ವರ್ಷಗಳ ಹಿಂದೆ ಯೋಗಕ್ಕೆ ಮೊರೆ ಹೋದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕುಂದ್ರಾಗೆ ಈಗ ಯೋಗವೇ ಜೀವನವಾಗಿದೆ.

ಫಿಟ್ನೆಸ್‌ ಬಗ್ಗೆ ವಿಪರೀತ ಕ್ರೇಜ್‌ ಹೊಂದಿರುವ ಶಿಲ್ಪಾ ಮದುವೆ, ಮಗುವಾದ ನಂತರವೂ ಯೋಗವನ್ನು ಮರೆತಿಲ್ಲ. ಎಷ್ಟೇ ಒತ್ತಡವಿರಲಿ, ಕೆಲಸವಿರಲಿ ವಾರದಲ್ಲಿ ಮೂರು ಬಾರಿ ಒಂದು ಗಂಟೆಯಂತೆ ಬೆವರು ಹರಿಸುವುದನ್ನು ತಪ್ಪಿಸುವುದಿಲ್ಲ.

ಶಿಲ್ಪಾ ಸೌಂದರ್ಯದ ಗುಟ್ಟು ಯೋಗ ಎನ್ನುವುದು ರಹಸ್ಯವಾಗಿ ಉಳಿದಿಲ್ಲ. 44ರ ಹರೆಯದಲ್ಲೂ ಶಿಲ್ಪಕಲೆಯಂತಹ ತಿದ್ದಿತೀಡಿದ ಮೈಮಾಟ ಹೊಂದಿರುವ ಶಿಲ್ಪಾ ತಮ್ಮ ಆರೋಗ್ಯ, ಸೌಂದರ್ಯ ಮತ್ತು ಚಿರಯೌವ್ವನದ ಶ್ರೇಯವನ್ನು ಯೋಗಕ್ಕೆ ಅರ್ಪಿಸುತ್ತಾರೆ.

‘ಯೋಗದಿಂದಾಗಿ ಶಿಲ್ಪಾ ವಯಸ್ಸು ತಿರುಗಿ ಹೊರಟಿದೆ ಎಂದು ಎಲ್ಲರೂ ಛೇಡಿಸುತ್ತಾರೆ. ದೇಹ ಸೌಂದರ್ಯ, ಇನ್ನೂ ಯುವತಿಯಂತೆ ಕಾಣಲು ನಾನು ಯೋಗ ಮಾಡುತ್ತಿಲ್ಲ. ಆಂತರಿಕ ಸೌಂದರ್ಯ ಮತ್ತು ಜೀವನದ ಆನಂದ ಸವಿಯಲು ಯೋಗವನ್ನು ತಪ‍್ಪಸ್ಸಿನಂತೆ ಸ್ವೀಕರಿಸಿದ್ದೇನೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT