ಸೋಮವಾರ, ಜನವರಿ 18, 2021
27 °C

ಗಾಯಕಿ ಶಿರ್ಲಿ ತೆರೆಗೆ ಬರಲು ಭರ್ಜರಿ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗಶೌರ್ಯ ಮತ್ತು ಶಿರ್ಲೆ ಹೊಸ ಚಿತ್ರದ ಪೋಸ್ಟರ್‌ (ಟ್ವಿಟರ್‌ ಚಿತ್ರ)

ತೆಲುಗಿನ  ಗಾಯಕಿ ಶಿರ್ಲಿ ಸೇತಿಯಾ ಅವರು ನಟ ನಾಗ ಶೌರ್ಯ ಜತೆ ತೆರೆ ಹಂಚಿಕೊಳ್ಳಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಗಾಯನದಿಂದ ನಟನೆಯತ್ತ ಹೊರಳಿರುವ ಅವರ ಪ್ರತಿಭೆ  ಕಾಣಲು ಅಭಿಮಾನಿಗಳೂ ಎದುರು ನೋಡುತ್ತಿದ್ದಾರೆ. 

ಅಂದಹಾಗೆ ನಾಗಶೌರ್ಯ ಅವರದ್ದು ಇದು ನಾಲ್ಕನೇ ಚಿತ್ರ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಶಿರ್ಲಿ ಅವರು ಚಿತ್ರದ ಕುರಿತು ತಮ್ಮ ಮೈಕ್ರೋ ಬ್ಲಾಗಿಂಗ್‌ ಪುಟದಲ್ಲಿ ಬರೆದುಕೊಂಡಿದ್ದಾರೆ. ಚಿತ್ರವನ್ನು ಅನೀಶ್‌ ಕೃಷ್ಣ ನಿರ್ದೇಶಿಸುತ್ತಿದ್ದಾರೆ. ಉಷಾಮುಲ್ಪುರಿ ಅವರು ಇರಾ ಕ್ರಿಯೇಷನ್ಸ್‌ ಬ್ಯಾನರ್‌ ಅಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಮಾರುತಿ ಸ್ವರಸಾಗರ್‌ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಂದಹಾಗೆ ಶಿರ್ಲೆ ಅವರು ಈ ಚಿತ್ರಕ್ಕೆ ₹ 35 ಲಕ್ಷ ಸಂಭಾವನೆ ಪಡೆಯುತ್ತಿದ್ದಾರಂತೆ. ಮೊದಲ ಚಿತ್ರಕ್ಕೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿರುವ ನಟಿ ಇವರೇ ಮೊದಲಿರಬೇಕು ಎಂದು ಟಾಲಿವುಡ್‌ನಲ್ಲಿ ಸುದ್ದಿ ಹಬ್ಬಿದೆ. ಇದೇ ವೇಳೆ ಶಿರ್ಲೆ ಅವರು ತಮ್ಮ ಮೊದಲ ಹಿಂದಿ ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ‘ನಿಕಮ್ಮ’ ಅವರು ಭಾಗವಹಿಸುತ್ತಿರುವ ಚಿತ್ರ. ಶಿಲ್ಪಾ ಶೆಟ್ಟಿ ಮತ್ತು ಅಭಿಮನ್ಯು ದೇಸಾಯಿ ಪ್ರಧಾನ ಭೂಮಿಕೆಯಲ್ಲಿದ್ದಾರೆ. 

ಯಾರಿವರು ಶಿರ್ಲೆ?

ಶಿರ್ಲೆ ಅನಿವಾಸಿ ಭಾರತೀಯ ಕುಟುಂಬದವರು. ಅವರ ಕುಟುಂಬ ನ್ಯೂಜಿಲೆಂಡ್‌ನ ಅಕ್ಲೆಂಡ್‌ನಲ್ಲಿ ನೆಲೆಸಿದೆ. ಈ ವರ್ಷಾರಂಭದಲ್ಲಿ ಶಿರ್ಲೆ ಅವರು ‘ಮಸ್ಕ’ ಎಂಬ ಹಿಂದಿ ಚಿತ್ರದಲ್ಲಿ ನಟಿಸಿದ್ದರು. ಡಿಜಿಟಲ್‌ ವೇದಿಕೆಯಲ್ಲಿ ಅದು ಬಿಡುಗಡೆ ಆಗಿತ್ತು. ಆದರೆ ಅದು ಯಶಸ್ಸು ಕಾಣಲಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು