ಗುರುವಾರ , ಫೆಬ್ರವರಿ 20, 2020
26 °C

ಪತ್ತೇದಾರಿಗೆ ಸಜ್ಜಾದ ಶಿವಾಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಶಿವಾಜಿ ಸುರತ್ಕಲ್’ –ರಮೇಶ್‌ ಅರವಿಂದ್‌ ನಟನೆಯ 101ನೇ ಚಿತ್ರ. ಇದರಲ್ಲಿ ಮೊದಲ ಬಾರಿಗೆ ಅವರು ಪತ್ತೇದಾರಿಯಾಗಿ ಬಣ್ಣ ಹಚ್ಚಿದ್ದಾರೆ. ಅವರು ಬಣ್ಣದಲೋಕ ಪ್ರವೇಶಿಸಿ ಮೂರು ದಶಕ ಉರುಳಿವೆ. ರೊಮ್ಯಾಂಟಿಕ್‌, ಆ್ಯಕ್ಷನ್‌, ಥ್ರಿಲ್ಲರ್‌ ಚಿತ್ರಗಳಲ್ಲಿ ನಟಿಸಿರುವ ಅವರಿಗೆ ಈ ಪಾತ್ರ ವಿಭಿನ್ನವಾದುದು.

ಪತ್ತೇದಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅವರ ಆಸೆಯನ್ನೂ ನಿರ್ದೇಶಕ ಆಕಾಶ್ ಶ್ರೀವತ್ಸ ಈಡೇರಿಸಿದ್ದಾರಂತೆ. ಮಡಿಕೇರಿ, ಮೈಸೂರು, ಬೆಂಗಳೂರಿನ ಸುತ್ತಮುತ್ತ ಈ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಪೋಸ್ಟರ್‌ನಲ್ಲಿ ರಮೇಶ್ ಅವರ ಗಡ್ಡದಾರಿ ಲುಕ್ ಸಾಕಷ್ಟು ಊಹೆ ಹಾಗೂ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಇದಕ್ಕೆ ಫೆ. 21ರಂದು ಉತ್ತರ ಸಿಗಲಿದೆ.

ಈ ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ ಎರಡು ಹಾಡುಗಳನ್ನು ಬರೆದಿದ್ದಾರೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಯು/ಎ ಪ್ರಮಾಣ ಪತ್ರ ನೀಡಿದೆ. ಗುರುಪ್ರಸಾದ್ ಎಂ.ಜಿ. ಅವರ ಛಾಯಾಗ್ರಹಣವಿದೆ. ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ಬಂಡವಾಳ ಹೂಡಿದ್ದಾರೆ.

ಕಳೆದ ವರ್ಷ ರಮೇಶ್‌ ಅವರು ಆ್ಯಕ್ಷನ್‌ ಕಟ್‌ ಹೇಳಿರುವ ಮತ್ತು ನಟಿಸಿರುವ ಯಾವೊಂದು ಸಿನಿಮಾವೂ ಬಿಡುಗಡೆಯಾಗಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರಕ್ಕೆ ಕಾರಣವಾಗಿದೆ. ಹಿಂದಿಯ ‘ಕ್ವೀನ್ಸ್‌’ ಚಿತ್ರ ಕನ್ನಡದಲ್ಲಿ ‘ಬಟರ್‌ ಫ್ಲೈ’ ಮತ್ತು ತಮಿಳಿನಲ್ಲಿ ‘ಪ್ಯಾರಿಸ್‌ ಪ್ಯಾರಿಸ್‌’ ಆಗಿ ರಿಮೇಕ್‌ ಆಗಿದೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಅವರೇ.

‘ಭೈರಾದೇವಿ’ ಚಿತ್ರದಲ್ಲಿ ರಮೇಶ್‌ ಅವರು ಅಪರಾಧ ವಿಭಾಗದ ಪೊಲೀಸ್‌ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ‘100’ ಚಿತ್ರದಲ್ಲಿ ಅವರದು ಸೈಬರ್ ಅಪರಾಧ ವಿಭಾಗದ ತನಿಖಾಧಿಕಾರಿ ಪಾತ್ರ. ಇದನ್ನೂ ಅವರೇ ನಿರ್ದೇಶಿಸಿದ್ದಾರೆ. ರಚಿತಾ ರಾಮ್ ಮತ್ತು ಪೂಜಾ ಈ ಚಿತ್ರದ ನಾಯಕಿಯರು. ಈ ವರ್ಷ ರಮೇಶ್‌ ನಟನೆಯ ಈ ಚಿತ್ರಗಳು ತೆರೆಕಾಣುವ ನಿರೀಕ್ಷೆಯಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು