ಬೆಂಗಳೂರು: ‘ವೇದ’ ಚಿತ್ರದ ನಂತರ ಗೀತಾ ಫಿಕ್ಚರ್ಸ್ ನಿರ್ಮಾಣದಲ್ಲಿ ನಟ ಶಿವರಾಜಕುಮಾರ್ ಅವರ ಮತ್ತೊಂದು ಚಿತ್ರ ಘೋಷಣೆಯಾಗಿದೆ.

ಶಿವರಾತ್ರಿ ಪ್ರಯುಕ್ತ ಈ ಬಗ್ಗೆ ಶಿವರಾಜಕುಮಾರ್ ಅವರು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು ಹೊಸ ಚಿತ್ರಕ್ಕೆ ‘ಭೈರತಿ ರಣಗಲ್’ ಎಂದು ಶೀರ್ಷಿಕೆ ನೀಡಲಾಗಿದೆ.

ನಿರೀಕ್ಷೆಯಂತೆ ಈ ಸಿನಿಮಾವನ್ನು ಮಫ್ತಿ ಖ್ಯಾತಿಯ ನರ್ತನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಗೀತಾ ಫಿಕ್ಚರ್ಸ್ ಹಣ ಹೂಡಿದೆ.

ಶಿವರಾಜಕುಮಾರ್ ಅವರ 126 ನೇ ಚಿತ್ರವಾದ ‘‘ಭೈರತಿ ರಣಗಲ್’ ’ ಮಫ್ತಿ ಸಿನಿಮಾದ ಫ್ರಿಕ್ವೆಲ್ ಆಗಿದೆ ಎಂಬುದು ತಿಳಿದು ಬಂದಿದೆ. ಇದನ್ನು ಹೊರತಪಡಿಸಿದರೆ ಚಿತ್ರತಂಡ ತಾರಾಗಣ, ಸಿಬ್ಬಂದಿಯ ಇತರೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಚಿತ್ರಕಥೆ ಅಂತಿಮವಾಗಿದ್ದು ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ ಎಂದು ನಿರ್ದೇಶಕ ನರ್ತನ್ ಅವರು ಖಾಸಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಅಂದಹಾಗೆ ಗೀತಾ ಫಿಕ್ಚರ್ಸ್ ಸಂಸ್ಥೆಯ ಎರಡನೇ ಸಿನಿಮಾ ಬೈರತಿ ರಣಗಲ್ ಅಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

ಕ್ರಿಕೆಟಿಗ ಪೃಥ್ವಿ ಶಾ ಜೊತೆ ಕಿರಿಕ್ ಮಾಡಿಕೊಂಡ ಆ ಸುಂದರಿ ಯಾರು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.