ಐಟಿ ದಾಳಿಯಿಂದ ಏನೂ ವ್ಯತ್ಯಾಸ ಆಗಿಲ್ಲ: ಶಿವರಾಜ್ ಕುಮಾರ್

7

ಐಟಿ ದಾಳಿಯಿಂದ ಏನೂ ವ್ಯತ್ಯಾಸ ಆಗಿಲ್ಲ: ಶಿವರಾಜ್ ಕುಮಾರ್

Published:
Updated:

ಬೆಂಗಳೂರು: 'ನಮ್ಮ ಮನೆಯ ಮೇಲೆ ಐ.ಟಿ. ಅಧಿಕಾರಿಗಳು ನಡೆಸಿದ ದಾಳಿಯಿಂದ ನನ್ನ ಮತ್ತು ನನ್ನ ಕುಟುಂಬದ ಮೇಲೆ ಯಾವ ರೀತಿಯ ಪರಿಣಾಮವೂ ಆಗಿಲ್ಲ' ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

ಐ.ಟಿ. ದಾಳಿಗೆ ಸಂಬಂಧಿಸಿದಂತೆ ಪ್ರಜಾವಾಣಿಗೆ ಪ್ರತಿಕ್ರಿಯೆ ನೀಡಿದ ಅವರು, 'ನಾನು ಎಂದಿನಂತೆ ನನ್ನ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ಚಿತ್ರೀರಣವೂ ಆರಂಭವಾಗಿದೆ. ಇಂದು (ಮಂಗಳವಾರ) ಕೂಡ ಚಿತ್ರೀಕರಣದಲ್ಲಿ ಭಾಗವಹಿಸಿಯೇ ಬಂದಿದ್ದೇನೆ' ಎಂದೂ ಹೇಳಿದರು.

'ಎರಡು ದಿನಗಳ ಕಾಲ ತೆರಿಗೆ ಅಧಿಕಾರಿಗಳು ಮನೆಯಲ್ಲಿದ್ದು ದಾಖಲೆ ಪರಿಶೀಲನೆ ನಡೆಸಿದ್ದು ನಮ್ಮ ಪಾಲಿಗೆ ಹೊಸ ಬಗೆಯ ಅನುಭವ' ಎಂದಿರುವ ಅವರು, 'ನಾವೆಲ್ಲರೂ ಆರಾಮವಾಗಿಯೇ ಇದ್ದೆವು. ದಿನವೂ ವಾಕ್ ಮಾಡುತ್ತಿದ್ದೆ. ಸರಿಯಾಗಿಯೇ ಊಟ ಮಾಡುತ್ತಿದ್ದೆ. ನನಗೆ ಅಂಥ ವ್ಯತ್ಯಾಸ ಗೊತ್ತಾಗಲಿಲ್ಲ. ಬದುಕಿನಲ್ಲಿ ಬರುವ ಎಲ್ಲವನ್ನೂ ಸಕಾರಾತ್ಮಕವಾಗಿಯೇ ತೆಗೆದುಕೊಳ್ಳಬೇಕು ಎನ್ನುವುದು ನನ್ನ ನಿಲುವು. ಈ ವಿಷಯವನ್ನೂ ಹಾಗೆಯೇ ಸ್ವೀಕರಿಸಿದ್ದೇನೆ. ಅದರ ಬಗ್ಗೆ ನನಗೆ ಯಾವ ಚಿಂತೆಯೂ ಇಲ್ಲ' ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 14

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !