ಶಿವರಾಜ್ಕುಮಾರ್ ನಟನೆಯ ‘ಬೇಲ್’ ಚಿತ್ರದ ಫಸ್ಟ್ಲುಕ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ವಿಜಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಿವಣ್ಣ ವಿಭಿನ್ನ ಲುಕ್ನಿಂದ ಗಮನ ಸೆಳೆಯು

ತ್ತಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಚಿತ್ರದ ಚಿತ್ರೀಕರಣ ಕೊನೆ ಹಂತದಲ್ಲಿದೆ.

‘ಬೇಲ್ ಸಿಗದಿದ್ದರೆ ಜೈಲೇ ಗತಿ ಎನ್ನುವ ಪರಿಕಲ್ಪನೆ ಚಿತ್ರವಿದು. ಆ್ಯಕ್ಷನ್, ಮಾಸ್ ಅಂಶಗಳ ಜತೆಗೆ ಭಾವುಕ ಪಯಣವಿದೆ. ವರಮಹಾ ಲಕ್ಷ್ಮಿ ಹಬ್ಬಕ್ಕೆ ಚಿತ್ರ ಬಿಡುಗಡೆ ಆಲೋಚನೆಯಿದೆ’ ಎಂದಿದ್ದಾರೆ ಪವನ್.

ಕೆವಿಎನ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲಿ ಜಯರಾಮ್, ದೀಕ್ಷಿತ್ ಶೆಟ್ಟಿ, ಸಾಯಿಕುಮಾರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಶಿವಣ್ಣನ ಫಸ್ಟ್ಲುಕ್ ಟೀಸರ್ನಲ್ಲಿ ‘ನೀನು ಹಚ್ಚಿರುವ ಬೆಂಕಿ ಬರೀ ಊರನ್ನಲ್ಲ, ದೇಶವನ್ನು ಸುಡುತ್ತಿದೆ’ ಎಂಬ ಮಾತು ಬರುತ್ತದೆ. ನಾಯಕ ಮತ್ತು ಖಳರ ಗುಂಪಿನ ನಡುವಿನ ಭರ್ಜರಿ ಆ್ಯಕ್ಷನ್ ಸಿನಿಮಾ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವೈದ್ಯ ಛಾಯಾಚಿತ್ರಗ್ರಹಣ, ಶಶಾಂಕ್ ನಾರಾಯಣ್ ಸಂಕಲನ ಚಿತ್ರಕ್ಕಿದೆ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-51-362722168

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.