‘ಮದುವೆ ಅವರವರ ಆಯ್ಕೆ’

7

‘ಮದುವೆ ಅವರವರ ಆಯ್ಕೆ’

Published:
Updated:
Deccan Herald

‘ನನ್ನ ಮಗಳು ಶ್ರದ್ಧಾ ಕಪೂರ್‌ ಹಾಗೂ ಮಗ ಸಿದ್ಧಾರ್ಥ್‌ ಅವರಿಷ್ಟ ಪಡುವವರನ್ನೇ ಮದುವೆಯಾಗಲಿ, ನಾನು ಅವರ ಮದುವೆ ವಿಷಯದಲ್ಲಿ ಮೂಗು ತೂರಿಸುವುದಿಲ್ಲ’ ಎಂದು ಬಾಲಿವುಡ್‌ ನಟ ಶಕ್ತಿ ಕಪೂರ್‌ ಹೇಳಿದ್ದಾರೆ. 

ಮಗಳಿಗೆ ಗಂಡು ಹುಡುಕುತ್ತಿದ್ದೀರಾ ಎಂಬ ಪ್ರಶ್ನೆಗೆ ಶಕ್ತಿಕಪೂರ್‌ ಈ ರೀತಿ ಉತ್ತರ ನೀಡಿದ್ದಾರೆ. ‘ಈಗಿನ ಕಾಲದಲ್ಲಿ ಮಕ್ಕಳು ಅವರ ಮದುವೆ ವಿಚಾರದಲ್ಲಿ ತಮ್ಮದೇ ನಿರ್ಧಾರ ಕೈಗೊಳ್ಳುತ್ತಾರೆ. ಅವರೇ ಅವರ ಸಂಗಾತಿಗಳನ್ನು ಹುಡುಕಿಕೊಳ್ಳುತ್ತಾರೆ. ಶ್ರದ್ಧಾ ವಿದೇಶದಲ್ಲಿದ್ದವಳು. ಆದರೆ ಆಕೆಗೆ ಪೂಜೆ, ಆಚರಣೆಗಳ ಬಗ್ಗೆ ಗೌರವವಿದೆ. ಸಂಪ್ರದಾಯಗಳನ್ನು ಪಾಲಿಸುತ್ತಾಳೆ. ಅದಕ್ಕಿಂತ ಮುಖ್ಯವಾಗಿ ಆಕೆ ಸ್ವತಂತ್ರ ಮಹಿಳೆ’ ಎಂದು ಮಗಳ ಬಗ್ಗೆ ಹೊಗಳಿಕೆಯ ಮಾತುಗಳನ್ನೇ ಆಡಿದ್ದಾರೆ. 

’ಇಷ್ಟಕ್ಕೂ ಮದುವೆಯೆನ್ನುವುದು ಅವರವರ ಆಯ್ಕೆ ಹಾಗೂ ಆದ್ಯತೆಯ ವಿಚಾರ. ಶ್ರದ್ಧಾ ಈಗಲೇ ಮದುವೆಯಾಗ ಬಯಸುತ್ತಾಳೆಯೋ, ಕೆರಿಯರ್‌ ಆಯ್ಕೆ ಮಾಡಿಕೊಳ್ಳುತ್ತಾಳೆಯೂ ಇದು ಅವಳ ಆಯ್ಕೆಗೆ ಬಿಟ್ಟಿದ್ದು. ಸದ್ಯ ಅವಳು ಕೆರಿಯರ್‌ನತ್ತ ಗಮನವಿರಿಸಿದ್ದಾಳೆ. ನಾವೂ ಅವಳಿಗೆ ಅವಳ ಗುರಿಯಿಂದ ವಿಚಲಿತರಾಗಿಸುತ್ತಿಲ್ಲ.’ ಎಂದು ಸ್ಪಷ್ಟಪಡಿಸಿದ್ದಾರೆ.

‘ನಾನು ಪ್ರೇಮವಿವಾಹ ಆದವನೇ. ಹಾಗಾಗಿ ನಾನು ಪ್ರೇಮ ವಿವಾಹವನ್ನು ಬೆಂಬಲಿಸುತ್ತೇನೆ’ ಎಂದು ಹೇಳುವ ಮೂಲಕ ಮಗ ಮತ್ತು ಮಗಳ ಮದುವೆ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಕ್ತಿ ಕಪೂರ್‌ ಮಹಾರಾಷ್ಟ್ರದ ಶಿವಾಂಗಿ ಅವರನ್ನು ಮದುವೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !