ಶನಿವಾರ, ಆಗಸ್ಟ್ 24, 2019
27 °C

ಗಗನಸಖಿ ಪಾತ್ರದಲ್ಲಿ ಶ್ರದ್ಧಾ

Published:
Updated:
Prajavani

‘ಸಾಹೋ’ದಲ್ಲಿ ನಟಿಸಿದ ಬಳಿಕ ಶ್ರದ್ಧಾ ಕಪೂರ್ ಅದೃಷ್ಟ ಬದಲಾದಂತಿದೆ. ‘ಸಾಹೋ’ ಶೂಟಿಂಗ್ ಮುಗಿಯುತ್ತಿದ್ದಂತೆ ಶ್ರದ್ಧಾ ಇದೀಗ ಟೈಗರ್ ಶ್ರಾಫ್‌ ಅಭಿನಯದ ‘ಭಾಗಿ 3’ ತಂಡವನ್ನು ಸೇರಿಕೊಂಡಿದ್ದಾರೆ. ಇದರಲ್ಲಿ ಅವರದು ಗಗನಸಖಿ ಪಾತ್ರ.

ಅಹಮ್ಮದ್ ಖಾನ್‌ ಈ ಸಿನಿಮಾಕ್ಕೆ ಆ್ಯಕ್ಷನ್‌, ಕಟ್ ಹೇಳುತ್ತಿದ್ದಾರೆ. 2016ರಲ್ಲಿ ಬಂದ ‘ಭಾಗಿ’ ಸರಣಿಯ ಮೊದಲ ಸಿನಿಮಾ ಹಿಟ್ ಆಗಿತ್ತು. ಇದರಲ್ಲಿ ಟೈಗರ್‌ ಹಾಗೂ ಶ್ರದ್ಧಾ ಜೋಡಿ ನಟಿಸಿತ್ತು. ‘ಭಾಗಿ 2’ರಲ್ಲಿ ದಿಶಾ ಪಟಾನಿ ನಾಯಕಿಯಾಗಿದ್ದರು. ಈಗ ಮೂರನೇ ಸರಣಿಯಲ್ಲಿ ಮತ್ತೆ ಶ್ರದ್ಧಾ ಕಾಣಿಸಿಕೊಳ್ಳುತ್ತಿದ್ದಾರೆ.

Post Comments (+)