ಗುರುವಾರ , ಏಪ್ರಿಲ್ 15, 2021
20 °C

ವರುಣ್‌ ಧವನ್‌ಗೆ ಶ್ರದ್ಧಾ ಕಪೂರ್‌ ಮೇಲೆ ಕ್ರಶ್‌ ಆಗಿತ್ತಂತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನನಗೆ 8 ವರ್ಷಯಿದ್ದಾಗಲೇ ಶ್ರದ್ಧಾ ಕಪೂರ್‌ ಮೇಲೆ ಕ್ರಶ್‌ ಆಗಿತ್ತು’ ಎಂದು ನಟ ವರುಣ್‌ ಧವನ್‌ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಬಾಲ್ಯದಲ್ಲಿ ವರುಣ್‌ ಹಾಗೂ ಶ್ರದ್ಧಾ ಇಬ್ಬರೂ ಶಾಲೆಯಲ್ಲಿ ಸ್ಟಾರ್‌ ಕಿಡ್‌ಗಳಾಗಿ ಗುರುತಿಸಿಕೊಂಡಿದ್ದರು. ಹಾಗೇ ಅವರಿಬ್ಬರೂ ಆತ್ಮೀಯ ಸ್ನೇಹಿತರೂ ಸಹ. ವರುಣ್‌, ಶ್ರದ್ಧಾ ಕಪೂರ್‌ ಜೋಡಿಯಾಗಿ ನಟಿಸಿರುವ ‘ಸ್ಟ್ರೀಟ್‌ ಡಾನ್ಸರ್‌ ತ್ರೀಡಿ’ ಚಿತ್ರವು ಜನವರಿ 24ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯವೊಂದರಲ್ಲಿ ವರುಣ್‌, ‘ಶ್ರದ್ಧಾ ಮೇಲೆ ನನಗೆ 8 ವರ್ಷವಿದ್ದಾಗಲೇ ಕ್ರಶ್‌ ಆಗಿತ್ತು’ ಎಂದು ಹೇಳಿದ್ದಾರೆ.

‘ಸ್ಟ್ರೀಟ್‌ ಡಾನ್ಸರ್‌ ತ್ರೀಡಿ’ ಚಿತ್ರದಂತೆ ನಮ್ಮ ಕತೆಯೂ ಇದೆ. ಅಂತರಶಾಲಾ ಸ್ಪರ್ಧೆಗಳು, ಸಣ್ಣ ದ್ವೇಷ ಹಾಗೂ ಮನಸ್ಸಿನ ಆಳದಲ್ಲಿ ಪ್ರೀತಿಯೂ ಇತ್ತು’ ಎಂದು ಹೇಳಿದ್ದಾರೆ.

‘ಸಣ್ಣ ವಯಸ್ಸಿನಲ್ಲಿ ಮನಸ್ಸಿನ ಭಾವನೆಗಳು ತುಂಬ ಚಂದವಾಗಿರುತ್ತವೆ. ಶ್ರದ್ಧಾ ಬಗ್ಗೆ  ಉತ್ತಮ ಭಾವನೆ ನನ್ನ ಮನಸ್ಸಿನಲ್ಲಿತ್ತು. ಅದು ಪವಿತ್ರವಾದುದು. ನಾವಿಬ್ಬರು ಉತ್ತಮ ಸ್ನೇಹಿತರು’ ಎಂದು ಅವರು ಹೇಳಿದ್ದಾರೆ.

‘ಸ್ಟ್ರೀಟ್‌ ಡಾನ್ಸರ್‌ ತ್ರೀಡಿ’ ಚಿತ್ರವನ್ನು ರೆಮೊ ಡಿ ಸೋಜಾ ನಿರ್ದೇಶನಮಾಡಿದ್ದು, ಈ ಚಿತ್ರದಲ್ಲಿ ನೋರಾ ಫತೇಹಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ವರುಣ್‌ ಹಾಗೂ ಶ್ರದ್ಧಾ ಈ ಹಿಂದೆ 2015ರಲ್ಲಿ ‘ಎಬಿಸಿಡಿ 2’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಿದು ಈ ಜೋಡಿಯ ಎರಡನೇ ಚಿತ್ರ.

‘ಕೂಲಿ ನಂ.1’ ರಿಮೇಕ್‌ ಚಿತ್ರದಲ್ಲೂ ವರುಣ್‌ ಧವನ್‌ ಅಭಿನಯಿಸುತ್ತಿದ್ದಾರೆ. ಆ ಚಿತ್ರ ಮೇ 1ರಂದು ಬಿಡುಗಡೆಯಾಗಲಿದೆ.  ಶ್ರದ್ಧಾ ಕಪೂರ್‌ ಆ್ಯಕ್ಷನ್‌ ಥ್ರಿಲ್ಲರ್‌ ‘ಭಾಗಿ 3’ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಈ ಚಿತ್ರ ಮಾರ್ಚ್‌ 6ರಂದು ತೆರೆ ಕಾಣಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು