ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಮಿನುಗಲು ‘ಭರಾಟೆ’ ನಾಯಕಿ ಶ್ರೀಲೀಲಾ ರೆಡಿ

Last Updated 23 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ನಟಿಸಿದ ಮೊದಲ ಎರಡು ಚಿತ್ರಗಳು ಯಶಸ್ಸು ತಂದುಕೊಟ್ಟ ಖುಷಿಯಲ್ಲಿರುವ ನಟಿ ಶ್ರೀಲೀಲಾಗೆ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಇದ್ದರೂ ಕೊಂಚ ಬ್ರೇಕ್‌ ಪಡೆದಿದ್ದರು. ಈಗ ಮತ್ತೆ ಅವರು ತೆರೆಮೇಲೆ ಮಿನುಗಲು ರೆಡಿಯಾಗಿದ್ದಾರೆ.

ಶ್ರೀಮುರಳಿ ನಾಯಕನಾಗಿದ್ದ ‘ಭರಾಟೆ’ ಚಿತ್ರದ ನಂತರ ಶ್ರೀಲೀಲಾ ಹೊಸ ಚಿತ್ರ ಒಪ್ಪಿಕೊಂಡಿಲ್ಲ.ಸ್ಕ್ರಿಪ್ಟ್‌ ಒಪ್ಪಿಕೊಳ್ಳುವ ಮೊದಲು ತೂಗಿ ಅಳೆದು ನೋಡುತ್ತಿದ್ದಾರೆ.ಪಾತ್ರಗಳ ಆಯ್ಕೆಯಲ್ಲಿ ತುಂಬಾ ಚ್ಯೂಸಿಯಾಗಿದ್ದು, ಯಶಸ್ಸಿನ ಹ್ಯಾಟ್ರಿಕ್‌ ಸಾಧಿಸುವ ಗುಣಾಕಾರ ನಡೆಸುತ್ತಿದ್ದಾರೆ.

ಬೇಡಿಕೆ ಇದೆ ಎಂದಾಕ್ಷಣ ಸಿಕ್ಕ ಸಿಕ್ಕ ಸ್ಕ್ರಿಪ್ಟ್‌ಗಳಿಗೆ ಓಕೆ ಎನ್ನದ ಜಾಣೆ ಇವರು. ಶ್ರೀಲೀಲಾ ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ‘ಕಿಸ್‌’ ಮತ್ತು ಎರಡನೇ ಚಿತ್ರ ‘ಭರಾಟೆ’ ಯಶಸ್ವಿ ಪ್ರದರ್ಶನ ಕಂಡವು. ಈ ಎರಡು ಚಿತ್ರಗಳಲ್ಲಿನ ನಟನೆಯಿಂದಾಗಿ ಈ ಕ್ಯೂಟ್‌ ಸುಂದರಿಯನ್ನು ಸ್ಯಾಂಡಲ್‌ವುಡ್‌ ತಿರುಗಿ ನೋಡುವಂತಾಯಿತು.

ಶ್ರೀಲೀಲಾಗೆ ಕನ್ನಡವಲ್ಲದೆ ಬೇರೆ ಭಾಷೆಗಳಿಂದಲೂ ಅವಕಾಶಗಳು ಬಂದಿವೆಯಂತೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದು ಇವರ ಸದ್ಯದ ಗುರಿ. ‘ಬಿಡುವಿನ ನಂತರ ಎರಡುಹೊಸ ಪ್ರಾಜೆಕ್ಟ್‌ಗಳು ಬಂದಿದ್ದವು. ಡೇಟ್‌ ಹೊಂದಾಣಿಕೆಯಾಗದ ಕಾರಣಕ್ಕೆ ಈ ಎರಡರ ಪೈಕಿ ಒಂದನ್ನು ಒಪ್ಪಿಕೊಳ್ಳಬೇಕಾಗಿತ್ತು. ಒಂದು ಸಿನಿಮಾ ಒಪ್ಪಿಗೆ ನೀಡುವಷ್ಟರಲ್ಲಿ ಲಾಕ್‌ಡೌನ್‌ ಎದುರಾಯಿತು. ಲಾಕ್‌ಡೌನ್‌ಮುಗಿದ ಮೇಲೆ ನಾನೇ ನನ್ನ ಮುಂದಿನ ಸಿನಿಮಾ ಪ್ರಕಟಿಸುತ್ತೇನೆ’ ಎಂದು ಮಾತು ವಿಸ್ತರಿಸಿದರು.

ಹೋಂ ಕ್ವಾರಂಟೈನ್‌ ಕಡೆಗೆ ಮಾತು ಹೊರಳಿದಾಗ, ‘ಮನೆಯಲ್ಲೇ ಇದ್ದೇನೆ. ಅಜ್ಜಿಯ ಬಳಿ ಅಡುಗೆ ಕಲಿಯುತ್ತಿದ್ದೇನೆ. ಅವರು ಹೇಳುವ ಹಳೆ ಕಾಲದ ಕಥೆಗಳನ್ನು ದಿನವೂಕೇಳುತ್ತಿದ್ದೇನೆ. ಅವರು ಹೇಳುವ ಬ್ರಿಟಿಷರ ಕಾಲದಲ್ಲಿನ ಕಥನಗಳು, ನಮ್ಮ ಕುಟುಂಬದ ಬೇರುಗಳ ಮೂಲದ ಬಗ್ಗೆ ಕೇಳುವಾಗ ಥ್ರಿಲ್‌ ಆಗುತ್ತದೆ’ ಎನ್ನುವ ಮಾತು ಸೇರಿಸಿದರು.

‘ಅಮ್ಮ ಮತ್ತು ಅಜ್ಜಿಯ ಎದುರು ಬೆಳಿಗ್ಗೆ ಒಂದೂವರೆ ಗಂಟೆ ಕುಳಿತು ವೀಣೆ ನುಡಿಸುತ್ತೇನೆ. ನನಗೆ ನೃತ್ಯವೆಂದರೆ ತುಂಬಾ ಇಷ್ಟ. ಸಂಜೆ ಹೊತ್ತುಕ್ಲಾಸಿಕ್‌ ಸೇರಿ ಎಲ್ಲ ಬಗೆಯ ನೃತ್ಯಗಳನ್ನು ಮಾಡುತ್ತೇನೆ. ನನ್ನ ನೃತ್ಯ ಅಭ್ಯಾಸಕ್ಕೆ ಅಜ್ಜಿ, ಅಮ್ಮ ಮತ್ತು ನಮ್ಮ ಮನೆಯವರೆಲ್ಲರೂಈಗ ಪ್ರೇಕ್ಷಕರು’ ಎನ್ನಲು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT