‘ನೈಟ್‌ ಔಟ್‌’ ಸುಂದರಿಯ ಮಾತು

ಶುಕ್ರವಾರ, ಏಪ್ರಿಲ್ 19, 2019
22 °C

‘ನೈಟ್‌ ಔಟ್‌’ ಸುಂದರಿಯ ಮಾತು

Published:
Updated:
Prajavani

ರಾಕೇಶ್ ಅಡಿಗ ನಿರ್ದೇಶನದ ‘ನೈಟ್ ಔಟ್’ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಶ್ರುತಿ ಗೊರಾಡಿಯಾ. ಈ ಚಿತ್ರ ಏಪ್ರಿಲ್‌ 12ರಂದು ತೆರೆಗೆ ಬರಲು ಸಜ್ಜಾಗಿದೆ.

‘ನನ್ನ ವ್ಯಕ್ತಿತ್ವ ಏನಿದೆಯೋ ಅದಕ್ಕೆ ವಿರುದ್ಧವಾದ ಸ್ವಭಾವ ಇರುವ ಪಾತ್ರ ಈ ಚಿತ್ರದಲ್ಲಿ ನನಗೆ ಸಿಕ್ಕಿದೆ’ ಎಂದರು ಶ್ರುತಿ. ರಾಕೇಶ್ ಅವರು ತಮ್ಮ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆದಿದ್ದರು. ಅಲ್ಲಿ ಶ್ರುತಿ ಕೂಡ ಇದ್ದರು.

‘ನನ್ನದು ಜೋವಿಯಲ್ ಆಗಿರುವ ವ್ಯಕ್ತಿತ್ವ. ಆದರೆ ರಾಕೆಶ್ ಅವರು ನನ್ನನ್ನು ತಣ್ಣಗಿನ ಸ್ವಭಾವದ ವ್ಯಕ್ತಿಯನ್ನಾಗಿಸಿದ್ದಾರೆ’ ಎಂದು ಹೇಳಿಕೊಂಡರು ಈ ಗುಜರಾತಿ ಸುಂದರಿ. ಶ್ರುತಿ ಅವರು ಈ ಹಿಂದೆ ‘ಸಂಕಷ್ಟಕರ ಗಣಪತಿ’ ಚಿತ್ರದಲ್ಲಿ ಅಭಿನಯಿಸಿದ್ದರು.

ಚಿತ್ರದಲ್ಲಿ ಸ್ಟಾರ್‌ ನಟ–ನಟಿಯರು ಇಲ್ಲದಿದ್ದರೂ ತಮ್ಮ ಆಕ್ಷೇಪವೇನೂ ಇಲ್ಲ ಎಂದು ನಿರ್ಮಾಪಕರು ರಾಕೇಶ್ ಅವರಲ್ಲಿ ಹೇಳಿದ್ದರಂತೆ. ‘ನಮ್ಮದೊಂದು ಹೊಸ ಪ್ರಯತ್ನ’ ಎಂದು ರಾಕೇಶ್ ಹೇಳಿದ್ದಾರೆ.

ಚಿತ್ರದ ಪೋಸ್ಟರ್‌ನಲ್ಲಿ ಆಟೊ ರಿಕ್ಷಾ ಚಿತ್ರವಿದೆ. ಇದು ಚಿತ್ರದ ಕಥೆಯ ಬಗ್ಗೆ ಒಂದಿಷ್ಟು ಸುಳಿವು ಬಿಟ್ಟುಕೊಡುತ್ತದೆ. ಅಂದರೆ, ಚಿತ್ರ ಆರಂಭವಾಗುವುದು ಆಟೊ ರಿಕ್ಷಾದಲ್ಲಿನ ‍ಪ್ರಯಾಣವೊಂದರ ಮೂಲಕ. ‘ಇದರಲ್ಲಿ ನಾವು ಯಾರನ್ನೂ ವೈಭವೀಕರಿಸಿಲ್ಲ. ಆಟೊ ಚಾಲಕರನ್ನೂ ವೈಭವೀಕರಿಸಿ ತೋರಿಸಿಲ್ಲ’ ಎಂದು ಚಿತ್ರತಂಡ ಹೇಳಿಕೊಂಡಿದೆ.

ಪಕ್ಕಾ ಕಮರ್ಷಿಯಲ್ ಆಗಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಸಮೀರ್ ಕುಲಕರ್ಣಿ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !