ಮತ್ತೆ ಶ್ರುತಿ ಮೀಟುತಿದೆ...

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಮತ್ತೆ ಶ್ರುತಿ ಮೀಟುತಿದೆ...

Published:
Updated:
Prajavani

ಹೆಚ್ಚು ಕಮ್ಮಿ ನಾಲ್ಕು ವರ್ಷಗಳಿಂದ ಸಂಗೀತವನ್ನೇ ಧೇನಿಸುತ್ತಿರುವ ನಟಿ ಶ್ರುತಿ ಹಾಸನ್ ಮತ್ತೆ ಕ್ಯಾಮೆರಾ ಮುಂದೆ ನಿಂತಿದ್ದಾರೆ. ನಟನೆಗೆ ಮರಳುವ ಬಗ್ಗೆ ಈ ಹಿಂದೆ ಹೇಳಿದ್ದಂತೆ ಶ್ರುತಿ ತಮಿಳಿನ ‘ಮಕ್ಕಳ್‌ ಸೆಲ್ವನ್‌’ ವಿಜಯ್ ಸೇತುಪತಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

ಎಸ್.ಪಿ. ಜಗನ್ನಾಥನ್‌ ನಿರ್ದೇಶನದ ಹೊಸ ಚಿತ್ರದ ಮುಹುರ್ತವೂ ಮುಗಿದಿದೆ.

ಶ್ರುತಿ, ಅಜಿತ್‌ ಜೊತೆಗೆ ‘ವೇದಾಲಂ’ನಲ್ಲಿ ನಟಿಸಿದ್ದು 2015ರಲ್ಲಿ. ಅದಾದ ಬಳಿಕ ಹೆಸರಾಂತ ನಿರ್ದೇಶಕರು ಕಾಲ್‌ಶೀಟ್‌ ಕೇಳಿದರೂ ಅವರು ನಿರಾಕರಿಸಿದ್ದರು. ಇದಕ್ಕೆ ಕಾರಣ ಅವರ ಸಂಗೀತಪ್ರೇಮ.

ಇದೀಗ, ‘ಲಾಭಂ’ ಚಿತ್ರದ ಮೂಲಕ ಶ್ರುತಿ ಎರಡನೇ ಇನ್ನಿಂಗ್ಸ್‌ ಶುರು ಮಾಡಲಿದ್ದಾರೆ. ವಿಜಯ್ ಅವರದೇ ನಿರ್ಮಾಣದ ಚಿತ್ರ ಇದಾಗಿದ್ದು, ಕಲೈಯರಸನ್‌ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

2000ನೇ ಇಸವಿಯಲ್ಲಿ ‘ಹೇ ರಾಮ್‌’ ಚಿತ್ರದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು ಶ್ರುತಿ. ಆ ಚಿತ್ರದಲ್ಲಿ ವಲ್ಲಭಭಾಯ್‌ ಪಟೇಲ್‌ ಅವರ ಮಗಳ ಪಾತ್ರದಲ್ಲಿ ಜೀವ ತುಂಬಿದ್ದರು. ಬಹುಭಾಷಾ ನಟ ಕಮಲಹಾಸನ್‌ ಮಗಳು ಎಂಬ ತಾರಾ ವರ್ಚಸ್ಸಿಗಿಂತಲೂ ಹೆಚ್ಚಾಗಿ ತಮ್ಮ ಪ್ರತಿಭೆಯ ಮೇಲಿನ ನಂಬಿಕೆಯಿಂದಲೇ ಮುನ್ನಡಿಯಿಟ್ಟವರು.

ಸಂಗೀತವೆಂದರೆ ಬಾಲ್ಯದಿಂದಲೂ ಹುಚ್ಚು ಪ್ರೀತಿ. ನಟನೆಗಿಂತ ಹಾಡುವಾಸೆಯೇ ಹೆಚ್ಚು. ಹಾಗಾಗಿಯೇ ಒಂದು ಸಣ್ಣ ಬ್ರೇಕ್‌ ತೆಗೆದುಕೊಂಡರು. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !