ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಷನ್ ಮಜ್ನು ಶೂಟಿಂಗ್ ಆರಂಭಿಸಿದ ರಶ್ಮಿಕಾ ಮಂದಣ್ಣ, ಸಿದ್ಧಾರ್ಥ್ ಮಲ್ಹೋತ್ರಾ

Last Updated 11 ಫೆಬ್ರುವರಿ 2021, 11:02 IST
ಅಕ್ಷರ ಗಾತ್ರ

ಸಿದ್ಧಾರ್ಥ ಮಲ್ಹೋತ್ರಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಬಾಲಿವುಡ್‌ನ ಮಿಷನ್ ಮಜ್ನು ಚಿತ್ರದ ಶೂಟಿಂಗ್ ಆರಂಭವಾಗಿದೆ. ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ರಶ್ಮಿಕಾ ಹಾಗೂ ಸಿದ್ಧಾರ್ಥ್‌.

1970ರ ಸಮಯದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಪಾಕಿಸ್ತಾನದ ಹೃದಯಭಾಗದಲ್ಲಿ ಭಾರತ ನಡೆಸಿದ ಕಾರ್ಯಾಚರಣೆ 2 ದೇಶಗಳ ನಡುವಿನ ಸಂಬಂಧವನ್ನು ಹೇಗೆ ಬದಲಿಸಿತ್ತು ಎಂಬ ಅಂಶವನ್ನೂ ಈ ಚಿತ್ರದ ಒಳಗೊಂಡಿದೆ.

ಏಕ್ ವಿಲನ್ ಖ್ಯಾತಿಯ ಸಿದ್ಧಾರ್ಥ್‌ ತಮ್ಮ ಟ್ವಿಟರ್ ಖಾತೆಯಲ್ಲಿ ‘ಒಂದು ವಿಶೇಷ ತಂಡದೊಂದಿಗೆ ಮಿಷನ್ ಮಜ್ನು ಸಿನಿಮಾದ ಮೊದಲ ದಿನ’ ಎಂದು ಬರೆದುಕೊಂಡಿದ್ದಾರೆ.

36ವರ್ಷದ ಈ ನಟ ಗುಪ್ತಚರ ದಳದ, ಕಾರ್ಯಾಚರಣೆಯ ಮುಂದಾಳತ್ವ ವಹಿಸಿದ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪರ್ವೇಜ್ ಶೇಖ್, ಆಸೀಮ್ ಅರೋರಾ ಹಾಗೂ ಸುಮಿತ್ ಬಥೇಜಾ ಈ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ. ಶಾಂತನು ಬಾಗ್ಚಿ ಈ ಸಿನಿಮಾದ ಮೂಲಕ ನಿರ್ದೇಶಕನ ಪಟ್ಟಕ್ಕೇರುತ್ತಿದ್ದಾರೆ.

ಈ ಸಿನಿಮಾದ ಮೂಲಕ ಕನ್ನಡತಿ ರಶ್ಮಿಕಾ ಮಂದಣ್ಣ ಬಾಲಿವುಡ್‌ಗೆ ಜಿಗಿಯುತ್ತಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ನಟನೆಯ ಆರಂಭಿಸಿದ್ದ ಇವರಿಗೆ ತೆಲುಗಿನ ‘ಗೀತಾ ಗೋವಿಂದಂ’ ಸಿನಿಮಾ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT