ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್‌ ಖಾನ್‌ಗೆ ‘ಕಿಸ್‌‘ ಮಾಡಿದ ಸಿದ್ಧಾರ್ಥ್‌ ಪ್ರೇಯಸಿ ಶೆಹನಾಜ್‌ ಗಿಲ್‌

Last Updated 4 ಮೇ 2022, 9:26 IST
ಅಕ್ಷರ ಗಾತ್ರ

ಮುಂಬೈ: ಹಿಂದಿಯ ಕಿರುತೆರೆ ನಟಿ, ಬಿಗ್‌ ಬಾಸ್‌ ಖ್ಯಾತಿಯ ಶೆಹನಾಜ್‌ ಗಿಲ್‌ ಅವರು ನಟ ಸಲ್ಮಾನ್‌ ಖಾನ್‌ ಅವರಿಗೆ ಕಿಸ್‌ ಮಾಡಿರುವ ವಿಡಿಯೊ ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ.

ಸಲ್ಮಾನ್‌ ಅಭಿಮಾನಿಗಳು ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳ ಎಲ್ಲ ವೇದಿಕೆಗಳಲ್ಲೂ ಶೇರ್‌ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶೆಹನಾಜ್‌ ಗಿಲ್‌ ಅವರು ಸಲ್ಲೂ ಬಾಯ್‌ಗೆ ಆಪ್ತರಾಗಿದ್ದಾರೆ.

ಕಿರುತೆಯಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಶೆಹನಾಜ್‌ ಗಿಲ್‌ ಬಿಗ್‌ಬಾಸ್‌ ಪ್ರವೇಶಿಸಿದ ಬಳಿಕ ಹೆಚ್ಚು ಖ್ಯಾತರಾದರು. ಬಿಗ್‌ ಬಾಸ್‌ ಮನೆಯಲ್ಲಿ ಶೆಹನಾಜ್‌ ಅವರು, ನಟ ನಿರೂಪಕ ಸಿದ್ಧಾರ್ತ್‌ ಶುಕ್ಲಾ ಅವರೊಂದಿಗೆ ಆತ್ಮೀಯರಾಗಿದ್ದರು. ನಂತರ ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದಾಗಿಪ್ರಕಟಿಸಿದ್ದರು.

2021ರಲ್ಲಿ ಸಿದ್ಧಾರ್ಥ್‌ ಶುಕ್ಲಾ ಹೃದಯಾಘಾತದಿಂದ ನಿಧನರಾದರು. ನಂತರದ ದಿನಗಳ ಶೆಹನಾಜ್‌ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

ಸಲ್ಮಾನ್‌ ಖಾನ್‌ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದು ಈ ಚಿತ್ರಕ್ಕೆ ಶೆಹನಾಜ್‌ ಅವರಿಗೂ ಒಂದು ಮುಖ್ಯ ಪಾತ್ರ ನೀಡಿದ್ದಾರೆ ಎನ್ನಲಾಗಿದೆ. ಸಲ್ಲೂ ಬಾಯ್‌ ಅವರು ಹೊಸ ಚಿತ್ರ ಘೋಷಣೆ ಮಾಡಲಾಗಿದೆಯಾದರೂ, ಸಿನಿಮಾ ಟೈಟಲ್‌ ಅನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಹಾಗೇ ಶೆಹನಾಜ್‌ ಆಯ್ಕೆ ಬಗ್ಗೆಯೂ ಮಾಹಿತಿ ಅಧಿಕೃತವಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT