ಸಿಂಪಲ್ ಸಲುಗೆ

ಬುಧವಾರ, ಜೂನ್ 19, 2019
32 °C

ಸಿಂಪಲ್ ಸಲುಗೆ

Published:
Updated:
Prajavani

‘ಕುಷ್ಕ’ ಚಿತ್ರದ ‘ಸಿಂಪಲ್ ಸಲುಗೆ’ ಹಾಡಿನ ಲಿರಿಕಲ್‌ ವಿಡಿಯೊ ತೆರೆ ಕಂಡಿದ್ದು ಪ್ರೇಕ್ಷಕರ ಮನಸ್ಸಿಗೆ ಮುದನೀಡುತ್ತಿದೆ. ಅಭಿಲಾಷ್ ಗುಪ್ತ ಸಂಗೀತ ನಿರ್ದೇಶನ, ವಿಜಯ್ ಪ್ರಕಾಶ್ ಹಾಗೂ ಸಾನ್ವಿ ಶೆಟ್ಟಿ ಧ್ವನಿಯಲ್ಲಿ ಈ ಹಾಡು ಮೂಡಿ ಬಂದಿದೆ.

‘ಹೀಗೊಂದು ದಿನ’ ಚಿತ್ರವನ್ನು ನಿರ್ದೇಶಿಸಿದ ವಿಕ್ರಮ್ ಯೋಗಾನಂದ ಈಗ ‘ಕುಷ್ಕ’ಕ್ಕೆ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಚಂದುಗೌಡ ಮತ್ತು ಕೆಮಿಸ್ಟ್ರಿ ಕರಿಯಪ್ಪ ಚಿತ್ರದ ಸಂಜನಾ ಆನಂದ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಬ್ಬರ ಮಧ್ಯೆ ‘ಸಿಂಪಲ್ ಸಲುಗೆ’ ಮೂಡಿದಾಗ ಬರುವ ಡುಯೆಟ್‌ ಹಾಡು ಇದು.

ಹೀಗೊಂದು ದಿನ ಚಿತ್ರಕ್ಕೆ ಸಂಗೀತ ನೀಡಿ ಹೊಸ ಶೈಲಿಯಲ್ಲಿ ಹಾಡುಗಳನ್ನು ಕೊಟ್ಟಿದ್ದ ಅಭಿಲಾಷ್ ಗುಪ್ತ ಹಾಗೂ ಅದೇ ಚಿತ್ರಕ್ಕೆ ಎಲ್ಲ ಹಾಡುಗಳ ಸಾಹಿತ್ಯ ಬರೆದಿದ್ದ ರಾಮಕೃಷ್ಣ ರಾಣಗಟ್ಟಿ ಅವರ ಕಾಂಬಿನೆಷನ್‌ನಲ್ಲಿ ‘ಸಿಂಪಲ್ ಸಲುಗೆ’ ಹಾಡು ಮೂಡಿ ಬಂದಿದೆ. ಕೇಳುಗರ ಮನದಲ್ಲಿಯೂ ಜಾಗ ಮಾಡಿಕೊಳ್ಳುತ್ತಿದೆ. ನಿರ್ದೇಶಕರಾದ ಗುರು ಪ್ರಸಾದ್, ಶೋಭರಾಜ್, ಕೈಲಾಶ್ ಪಾಲ್ ಮುಖ್ಯ ಪಾತ್ರಗಳಲ್ಲಿ ಇದ್ದಾರೆ ಎಂದು ಚಿತ್ರದ ನಿರ್ದೇಶಕ ವಿಕ್ರಮ್ ಯೋಗಾನಂದ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !