ಈ ವಾರ ಕನ್ನಡದ ಆರು ಸಿನಿಮಾಗಳು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿವೆ.

ಫಸ್ಟ್ನೈಟ್ ವಿತ್ ದೆವ್ವ

ಪ್ರಥಮ್ ಅಭಿನಯದ ಚಿತ್ರಕ್ಕೆ ಪಿ.ವಿ.ಆರ್.ಸ್ವಾಮಿ ಗೂಗಾರೆದೊಡ್ಡಿ ನಿರ್ದೇಶನ, ಛಾಯಾಚಿತ್ರಗ್ರಹಣವಿದೆ. ಮನರಂಜನೆ ಜತೆಗೆ ಹಾರರ್ ಕಥಾಹಂದರ ಹೊಂದಿರುವ ಚಿತ್ರವೆಂದು ಚಿತ್ರತಂಡ ಹೇಳಿದೆ.

ನಿಖಿತಾ ಸ್ವಾಮಿ ನಾಯಕಿ. ಸುಶ್ಮಿತಾ, ಹರೀಶ್ ರಾಜ್, ಶ್ರೀನಿವಾಸಮೂರ್ತಿ, ರಮೇಶ್ ಭಟ್, ತುಕಾಲಿ ಸಂತೋಷ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಅದ್ವಿಕ್ ವರ್ಮ ಸಂಗೀತ ನಿರ್ದೇಶನವಿದೆ.

ನಾನು ಕರುಣಾಕರ

ಬಹುತೇಕ ಹೊಸಬರಿಂದಲೇ ಕೂಡಿರುವ ಚಿತ್ರವಿದು. ಆರ್ಯನ್ ತೇಜಸ್ ನಿರ್ದೇಶನದ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

‘ಅಪ್ಪ–ಮಗ ಹಾಗೂ ಗಂಡ–ಹೆಂಡತಿಯ ಬಾಂಧವ್ಯದ ಸುತ್ತ ಸಾಗುವ ಸಿನಿಮಾ. ಕಾಮಿಡಿ ಜಾನರ್ನ ಕಥೆಯಿದು’ ಎಂದಿದ್ದಾರೆ ನಿರ್ದೇಶಕ.

‘ನಮ್ಮ ಪಾಪ್ ಕಾರ್ನ್’ ಸಿನಿಮಾ ಪ್ರೊಡಕ್ಷನ್ ಬಂಡವಾಳ ಹೂಡಿದೆ. ರಾಧಾ ಭಗವತಿ ನಾಯಕಿ. ಭವೀಶ್, ಕರಿಸುಬ್ಬು, ಎಂ.ಕೆ ಮಠ, ಬಿ.ಎಂ. ವೆಂಕಟೇಶ ಮುಂತಾದವರು ಚಿತ್ರದಲ್ಲಿದ್ದಾರೆ.

ಅಪರಿಚಿತೆ

ಗೀತಪ್ರಿಯ, ಶ್ರೀನಾಥ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರಕ್ಕೆ ವಿಶ್ವನಾಥ ನಿರ್ದೇಶನವಿದೆ. ಅಮರ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸುರೇಶ್ ಕುಮಾರ್ ಬಂಡವಾಳ ಹೂಡಿದ್ದಾರೆ.

‘ಸಾಮಾಜಿಕ ಕಳಕಳಿ, ಸಂದೇಶ ಹೊಂದಿರುವ ಚಿತ್ರವಿದು. ಹೆಣ್ಣುಭ್ರೂಣ ಹತ್ಯೆ ಕುರಿತು ನೈಜ ಘಟನೆ ಆಧಾರಿತ ಕಥೆಯನ್ನು ಹೊಂದಿದೆ. ಇಂದಿಗೂ ನಮ್ಮ ಸಮಾಜದಲ್ಲಿ ಹೆಣ್ಣು ಎಂಬ ಕಾರಣಕ್ಕೆ ಭ್ರೂಣವನ್ನೇ ಹತ್ಯೆ ಮಾಡುವವರಿದ್ದಾರೆ. ಅಂಥವರ ವಿರುದ್ಧ ಸಿಡಿದೇಳುವ ಕಥೆ. ಶ್ರೀನಾಥ್ ಮತ್ತು ಅವರ ಪುತ್ರ ರೋಹಿತ್ ಹಲವು ವರ್ಷಗಳ ಬಳಿಕ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ’ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಸಿಂಧು ಲೋಕನಾಥ್, ಆರ್.ಜೆ.ನಿಖಿತಾ, ಶ್ರೀನಾಥ್ ಅವರ ಪುತ್ರ ರೋಹಿತ್ ಪ್ರಮುಖ ಪಾತ್ರದಲ್ಲಿದ್ದಾರೆ. ಅನಿಲ್ ಸಂಗೀತ, ಶಂಕರ್ ಛಾಯಾಚಿತ್ರಗ್ರಹಣ, ಮಂಜುನಾಥ್ ಶಿರಸಿ ಸಂಕಲನ ಚಿತ್ರಕ್ಕಿದೆ.

ಸೈಕಿಕ್

ಕ್ರೈಂ, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ ಪುಷ್ಕರ್ ಗಿರಿಗೌಡ ಆ್ಯಕ್ಷನ್–ಕಟ್ ಹೇಳಿದ್ದಾರೆ. ಸರ್ದಾರ್ ಸತ್ಯ, ಹಂಸಾ ಪ್ರತಾಪ್ ಮುಖ್ಯಭೂಮಿಕೆಯಲ್ಲಿದ್ದಾರೆ. ಸಿಲ್ಕ್ ಸಿನಿಮಾ ಅಡಿಯಲ್ಲಿ ಚೇತನ್ ಮಂಜುನಾಥ್ ಹಾಗೂ ಸಿಲ್ಕ್ ಮಂಜು ಚಿತ್ರವನ್ನು ನಿರ್ಮಿಸಿದ್ದಾರೆ.

‘ಸಾಮಾನ್ಯವಾಗಿ ಕ್ರೈಂ-ಥ್ರಿಲ್ಲರ್- ಇನ್ವೆಸ್ಟಿಗೇಶನ್ ಸಿನಿಮಾಗಳಲ್ಲಿ ರಕ್ತಸಿಕ್ತ ದೃಶ್ಯಗಳನ್ನು ವೈಭವೀಕರಿಸುತ್ತಾರೆ. ಆದರೆ ಈ ಸಿನಿಮಾದಲ್ಲಿ ಅದರ ಹೊರತಾಗಿ ಕ್ರೌರ್ಯವನ್ನು ಪರೋಕ್ಷವಾಗಿ ಮನದಟ್ಟು ಮಾಡುವ ರೀತಿಯಲ್ಲಿ ದೃಶ್ಯ ಸಂಯೋಜನೆ ಮಾಡಿದ್ದೇವೆ. ವ್ಯಕ್ತಿಯೊಬ್ಬ ಸೈಕ್ ಆಗಿ ಸರಣಿ ಕೊಲೆಗಳನ್ನು ಮಾಡುತ್ತಾನೆ. ಅದರ ಹಿಂದೆ ಕಥೆ ಸಾಗುತ್ತದೆ’ ಎಂದಿದ್ದಾರೆ ನಿರ್ದೇಶಕ.

ರಮೇಶ್ ಭಟ್, ಅರವಿಂದ್ (ರಥಸಪ್ತಮಿ), ಕೈಲಾಸ್ ದೇವ್, ನಿಖಿತಾ ದೋರ್ತೋಡಿ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾಕ್ಕೆ ಎಂ.ಎಸ್.ತ್ಯಾಗರಾಜ್ ಸಂಗೀತ, ಸಿನಿಟೆಕ್ ಸೂರಿ ಛಾಯಾಚಿತ್ರಗ್ರಹಣ, ವೈ.ಎಸ್.ಶ್ರೀಧರ್ ಸಂಕಲನವಿದೆ.

ಪ್ರೇಮಿ

ಎಸ್.ಪ್ರದೀಪ್ ವರ್ಮ ನಿರ್ದೇಶನ, ಸಂಗೀತ ನಿರ್ದೇಶನವಿದೆ. ಪ್ರೀತಿ ಕುರಿತಾದ ಕಥೆ ಹೊಂದಿರುವ ಸಿನಿಮಾವಿದು. ಗೌತಮ್ ಮಟ್ಟಿ ಛಾಯಾಚಿತ್ರಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ. ಅದ್ವಿಕ್ ಚಿತ್ರದ ನಾಯಕ. ಸಾತ್ವಿಕ, ಶೋಭಿತ, ಎಚ್. ಜಿ. ವೀರೇಶ್, ದ್ವಿತ ಕೆ. ಗೌಡ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಇವುಗಳಲ್ಲದೇ ‘ಸಿಂಹಪೂರಿಯ ಸಿಂಹ’ ಚಿತ್ರ ಕೂಡ ಈ ವಾರ ತೆರೆ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.