ಶನಿವಾರ, ಅಕ್ಟೋಬರ್ 16, 2021
22 °C

ಸಿನಿಮಾ: ‘ಸ್ನೇಹಿತ’ನ ಹಾಡು ಕೇಳಿದಿರಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಈ ಹಿಂದೆ ‘ಪ್ಯಾರ್ ಕಾ ಗೋಲ್ ಗುಂಬಜ್’ ಖ್ಯಾತಿಯ ಧನುಷ್ ನಾಯಕನಾಗಿ ನಟಿಸಿರುವ ‘ಸ್ನೇಹಿತ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು.

ಚಿತ್ರದ ನಿರ್ದೇಶಕರೂ ಆಗಿರುವ ಸಂಗೀತ್ ಸಾಗರ್ ಈ ಚಿತ್ರದ ಆರು ಹಾಡುಗಳನ್ನು ಬರೆದು, ಸಂಗೀತ ನೀಡಿದ್ದಾರೆ.

‘ಸ್ನೇಹಿತ’ ಸ್ನೇಹದ ಮಹತ್ವ ಸಾರುವ ಚಿತ್ರ. ಮನೆಮಂದಿಯಲ್ಲಾ ಒಟ್ಟಾಗಿ ಕುಳಿತು ನೋಡುವ ಚಿತ್ರವನ್ನು ನಿರ್ದೇಶಿಸಿರುವ ತೃಪ್ತಿ ಇದೆ. ಇಂದು ಹಾಡುಗಳು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ಕೂಡಾ ತೆರೆಗೆ ಬರಲಿದೆ’ ಎಂದರು ಚಿತ್ರದ ಸಂಗೀತ ನಿರ್ದೇಶಕ ಮತ್ತು ನಿರ್ದೇಶಕ ಸಂಗೀತ್ ಸಾಗರ್.

‘ಈ ಚಿತ್ರದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ. ‘ಸ್ನೇಹಿತ’ ಎಂದರೆ ಏನು ಎಂದು ನಾನು ಹೇಳುವುದಕ್ಕಿಂತ, ಸ್ವಲ್ಪ ದಿನದಲ್ಲೇ ನಮ್ಮ ಚಿತ್ರ ತೆರೆಗೆ ಬರಲಿದ್ದು, ಅದರಲ್ಲಿ ಎಲ್ಲವೂ ತಿಳಿಯಲಿದೆ. ನಮ್ಮ ಚಿತ್ರ ಯಾವುದೇ ಒಂದು ರೀತಿಯ ಸಿನಿಮಾ ಅಲ್ಲ. ಇದರಲ್ಲಿ ಸ್ನೇಹ, ಪ್ರೀತಿ, ಆ್ಯಕ್ಷನ್‌, ಉತ್ತಮ ಕಥೆ ಹಾಗೂ ಹಾಡುಗಳು ಎಲ್ಲಾ ಇವೆ’ ಎಂದರು ನಾಯಕ ಧನುಷ್.

‘ನಾನು ಈ ಚಿತ್ರದಲ್ಲಿ ಪ್ರಿಯಾ ಎಂಬ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು ನಾಯಕಿ ಸುಲಕ್ಷಾ ಕೈರಾ.

ಅಶೋಕ್ ಆರ್. ಈ ಚಿತ್ರ ನಿರ್ಮಾಪಕರು.

ನಿರ್ಮಾಪಕರಾದ ಭಾ ಮ ಹರೀಶ್, ಭಾ.ಮ. ಗಿರೀಶ್, ವಿತರಕ ನರ್ಗಿಸ್ ಬಾಬು, ನಿರ್ದೇಶಕ ಬಿ‌.ಆರ್.ಕೇಶವ್, ನಟ ಪ್ರಣಯ ಮೂರ್ತಿ, ಆಕಾಶ್ ಆಡಿಯೋದ ಕುಬೇರ್ ಹಾಗೂ ನಿತ್ಯಾನಂದ ಪ್ರಭು ಇದ್ದರು.

ಧನುಶ್, ಸುಲಕ್ಷ ಕೈರಾ, ಎಂ.ಎಸ್.ಉಮೇಶ್, ಶಿವರಾಮಣ್ಣ, ಎಂ.ಎಸ್‌.ಉಮೇಶ್, ಮನದೀಪ್ ರಾಯ್, ಆರ್.ಟಿ.ರಮಾ, ಕಿಲ್ಲರ್ ವೆಂಕಟೇಶ್, ಪ್ರಣಯ ಮೂರ್ತಿ ತಾರಾಬಳಗದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು