ಏನಿದು ಸೋನಂಸ್ಟೈಲ್‌ ಸೀರಿಯಲ್‌?

ಭಾನುವಾರ, ಮೇ 26, 2019
33 °C

ಏನಿದು ಸೋನಂಸ್ಟೈಲ್‌ ಸೀರಿಯಲ್‌?

Published:
Updated:
Prajavani

ಬಾಲಿವುಡ್‌ ನಟಿಯರ ಫ್ಯಾಷನ್‌ ಪರಿಭಾಷೆಯ ಬಗ್ಗೆ ಮಾತನಾಡುವಾಗ ಅನಿಲ್‌ ಕಪೂರ್‌ ಮಗಳು ಸೋನಂ ಕ‍ಪೂರ್‌ ಅಹುಜಾಳನ್ನು ಮರೆಯಲು ಸಾಧ್ಯವೇ ಇಲ್ಲ. ಮುಂಚೂಣಿ ವಸ್ತ್ರ ವಿನ್ಯಾಸಕರ ಹೊಸ ವಿನ್ಯಾಸಗಳನ್ನು ಶೋಕೇಸಿಂಗ್‌ ಮಾಡುವಲ್ಲಿಂದ ಹಿಡಿದು ತನ್ನದೇ ಪರಿಭಾಷೆಯಲ್ಲಿ ವ್ಯಾಖ್ಯಾನಿಸಿ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವವರೆಗೂ ಸೋನಂ ಮಾದರಿಯಾಗುತ್ತಾರೆ.

ಸೆಲೆಬ್ರಿಟಿಗಳಿಗೆ, ರೂಪದರ್ಶಿಗಳಿಗೆ ಮತ್ತು ಕಾರ್ಪೊರೇಟ್‌ ಜಗತ್ತಿನಲ್ಲಿ ದುಡಿಯುವ ಎಷ್ಟೋ ಯುವತಿಯರಿಗೆ ‘ಸ್ಟೈಲ್‌ ಐಕಾನ್‌’ ಆಗಿರುವುದು ಹೊಸ ಸಂಗತಿಯೇನಲ್ಲ. ಆಕೆಯನ್ನು ಸ್ಟೈಲ್‌, ಫ್ಯಾಷನ್‌, ಟ್ರೆಂಡ್‌, ಮೇಕಪ್‌, ಕೇಶಶೈಲಿ, ಮಾತನಾಡುವ ರೀತಿ... ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ಅನುಸರಿಸುವವರಿದ್ದಾರೆ.

ಇದನ್ನೆಲ್ಲ ಬಲ್ಲ ಸೋನಂ ಮುಂಬೈನಲ್ಲಿ ಇತ್ತೀಚೆಗೆ ಒಂದು ಸಂದೇಶ ರವಾನಿಸಿದ್ದಾರೆ. ತನ್ನ ಸ್ಟೈಲ್‌ ಮತ್ತು ಫ್ಯಾಷನ್ ರಹಸ್ಯಗಳನ್ನು ಒಂದೊಂದಾಗಿ ವೆಬ್‌ ಸೀರಿಸ್‌ನಲ್ಲಿ ಹಂಚಿಕೊಳ್ಳುವುದಾಗಿ ಅವರು ಹೇಳಿದ್ದಾರೆ.

ವೆಬ್‌ ಸೀರೀಸ್‌ ಯಾವಾಗ, ಯಾವ ವೇದಿಕೆ/ತಾಣದಲ್ಲಿ ಪ್ರಸಾರವಾಗುತ್ತದೆ ಎಂಬ ಮಾಹಿತಿಯನ್ನು ಅವರು ಬಿಟ್ಟುಕೊಟ್ಟಿಲ್ಲ. ಆದರೆ ಫ್ಯಾಷನ್ ತನ್ನ ಉಸಿರು, ಸ್ಟೈಲಿಶ್‌ ಆಗಿರೋದು ತನ್ನ ದಿನಚರಿ ಎಂದು ಬಿಂದಾಸ್ ಆಗಿ ಹೇಳುವ ಸೋನಂ ವೆಬ್‌ ಸೀರೀಸ್‌ನಲ್ಲಿ ಏನು ಹೇಳುತ್ತಾರೆ ಎಂಬ ಕಾತರ ಅವರ ಅಭಿಮಾನಿಗಳಲ್ಲಿ ಶುರುವಾಗಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು, ಫಾಲೋವರ್‌ಗಳನ್ನೂ ಹೊಂದಿರುವ ಈಕೆ ಸಾಂದರ್ಭಿಕವಾಗಿ ನೀಡುವ ಸಲಹೆಗಳು ತಮಗೂ ಉಪಯುಕ್ತವಾಗಿರುತ್ತವೆ ಎಂದು ಫ್ಯಾಷನ್‌ ವಿನ್ಯಾಸಕಿಯೊಬ್ಬರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. 2009ರಿಂದಲೂ ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ಕ್ರಿಯಾಶೀಲರಾಗಿರುವ ಸೋನಂ ಈ ತಾಣಗಳಲ್ಲೂ ತಮ್ಮ ಫ್ಯಾಷನ್‌ ಹೇಳಿಕೆಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

‘ಸ್ಟೈಲಿಶ್‌ ದಿವಾ’ ಎಂದೇ ಗುರುತಿಸಿಕೊಳ್ಳುವ ಸೋನಂಗೆ ಬಾಲ್ಯದಿಂದಲೂ ವಿಭಿನ್ನವಾಗಿ ಉಡುಗೆ ತೊಡುಗೆ ಧರಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಿದ್ದರಂತೆ. ‘ಫ್ಯಾಷನ್‌ ಅನ್ನೋದು ನನ್ನ ಜೀವನಶೈಲಿಯಲ್ಲೇ ಬೆರೆತುಬಿಟ್ಟಿದೆ. ನಾನು ಅದನ್ನೇ ಉಸಿರಾಡುವುದು’ ಎಂದು ಮಾರ್ಮಿಕವಾಗಿ ಹೇಳುತ್ತಾರೆ.

ಲಾರಿಯಲ್‌ ಪ್ಯಾರಿಸ್‌ ಪ್ರಸಾಧನ ಕಂಪೆನಿಯ ಬ್ರ್ಯಾಂಡ್‌ ರಾಯಭಾರಿಯಾಗಿರುವ ಸೋನಂ ಅಂತರರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ‘ಬಾಲಿವುಡ್‌ನ ಅತ್ಯುತ್ತಮ ಉಡುಗೆ ಧರಿಸಿದ ನಟಿ’, ‘ಸ್ಟೈಲ್‌ ಐಕಾನ್‌’, ‘ಬ್ಯೂಟಿ ಆಫ್‌ ದಿ ಇಯರ್‌’ ಮುಂತಾದ ಹೆಗ್ಗಳಿಕೆಗಳಿಗೆ  ಅವರು ಪಾತ್ರರಾಗಿದ್ದಾರೆ. ಫ್ಯಾಷನ್‌, ಲೈಫ್‌ಸ್ಟೈಲ್‌ ಮತ್ತು ಟ್ರೆಂಡ್‌ ಜಗತ್ತಿನ ಅಗ್ರಗಣ್ಯ ನಿಯತಕಾಲಿಕಗಳ ಮುಖಪುಟಗಳಲ್ಲಿ ಸೋನಂ ಮಿಂಚಿದ್ದಿದೆ. 

ಹೀಗೆ, ‘ಸ್ಟೈಲ್‌ ‌ಐಕಾನ್‌’ ಹೆಗ್ಗಳಿಕೆಗೆ ಎಲ್ಲಾ ರೀತಿಯಿಂದಲೂ ಹೊಂದುವ ಸೋನಂ ಕಪೂರ್‌ ಅಹುಜಾ ವೆಬ್‌ ಸೀರೀಸ್‌ ಏನು ಹೇಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ಸೋನಂ ಕ್ರಶ್ ಏನು ಗೊತ್ತಾ?

ಪ್ರತಿಯೊಬ್ಬರ ಬದುಕಿನಲ್ಲಿಯೂ ಇರುವಂತೆ ಸೋನಂಗೆ ಕೂಡಾ ‘ಕ್ರಶ್‌’ ಇದೆ! ಮದುವೆಯಾಗಿ ಸುಖವಾಗಿ ಸಂಸಾರ ಮಾಡುತ್ತಿರುವ ನಟಿಗೆ ಕ್ರಶ್‌ ಆಗಿದೆಯಾ ಎಂದು ಹುಬ್ಬೇರಿಸಬೇಡಿ. 

ಐಸ್‌ಕ್ರೀಂ... ಅದರಲ್ಲೂ ಚಾಕೊಲೇಟ್‌ ಐಸ್‌ಕ್ರೀಂ ಸೋನಂ ಅವರ ಕ್ರಶ್‌! ಈ ಗುಟ್ಟು ರಟ್ಟಾಗಿದ್ದು ‘ಮ್ಯಾಗ್ನಂ’ ಅವರ ಹೊಸ ಸ್ವಾದದ ಚೋಕೊಬಾರ್‌ ಬಿಡುಗಡೆ ಮಾಡಿದಾಗ. 

ಫಿಟ್‌ನೆಸ್‌ ಕಾಪಾಡಿಕೊಳ್ಳಲು ನಿಯಮಿತವಾಗಿ ವ್ಯಾಯಾಮ, ಪ್ರಾಣಾಯಾಮ, ಕೆಲವೊಮ್ಮೆ ಯೋಗಾಸನ, ಬಗೆ ಬಗೆಯ ನೃತ್ಯಾಭ್ಯಾಸ ಮಾಡುವ ಸೋನಂ ಐಸ್‌ಕ್ರೀಂ ತಿನ್ನಲಾರದೆ ಇರಲಾರರಂತೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !