ಮಂಗಳವಾರ, ನವೆಂಬರ್ 19, 2019
28 °C

ಸ್ಟಾರ್‌ ಕನ್ನಡಿಗನ ಹಾಡು

Published:
Updated:
Prajavani

ವಿ.ಆರ್. ಮಂಜುನಾಥ್ ನಿರ್ದೇಶನದ ‘ಸ್ಟಾರ್‌ ಕನ್ನಡಿಗ’ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಒಂದಿಷ್ಟು ಜನ ಆಟೊ ಚಾಲಕರು ಹಾಗೂ ಕ್ಯಾಬ್‌ ಚಾಲಕರು ಸೇರಿ ನಿರ್ಮಾಣ ಮಾಡಿರುವ ಸಿನಿಮಾ ಇದು.

ಚಿತ್ರದ ನಾಯಕ ನಟನಾಗಿ ಮಂಜುನಾಥ್ ಕಾಣಿಸಿಕೊಂಡಿದ್ದಾರೆ. ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಎಲ್ಲವೂ ಮಂಜುನಾಥ್ ಅವರದ್ದೇ. ಶಾಲಿನಿ ಭಟ್ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರವು ನವೆಂಬರ್ 1ರಂದು ತೆರೆಗೆ ಬರುವ ನಿರೀಕ್ಷೆ ಇದೆ. ಸಿನಿಮಾ ಮಾಡಬೇಕು ಎಂಬ ಗುರಿ ಹೊಂದಿದ ನಾಲ್ಕು ಜನ ಯುವಕರ ತಂಡಕ್ಕೆ ಯುವತಿಯೊಬ್ಬಳ ಪರಿಚಯ ಆಗುತ್ತದೆ. ಕಥಾ ನಾಯಕನ ಜೊತೆಗಿನ ಪರಿಚಯ ಪ್ರೇಮಕ್ಕೆ ತಿರುಗುತ್ತದೆ. ಅಲ್ಲಿಂದ ಮುಂದೆ ಏನಾಗುತ್ತೆ ಎಂಬುದು ಸಿನಿಮಾ ಕಥೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ‘ಇದು ಮಾಮೂಲಿ ಸಿನಿಮಾಗಳಂತೆ ಅಲ್ಲ’ ಎನ್ನುವುದು ಮಂಜುನಾಥ್ ಅವರ ಮಾತು. ರಾಕ್‌ಲೈನ್‌ ಸುಧಾಕರ್‌, ಕೋಬ್ರಾ ನಾಗರಾಜ್‌ ಈ ಚಿತ್ರದ ತಾರಾಗಣದಲ್ಲಿ ಇದ್ದಾರೆ.

ಪ್ರತಿಕ್ರಿಯಿಸಿ (+)