ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಬೀರ್‌, ಆಲಿಯಾ ಭಟ್‌ ಮದುವೆ: ಆಲಿಯಾ ತಾಯಿ ಹೇಳಿದ್ದೇನು?

Last Updated 28 ಅಕ್ಟೋಬರ್ 2021, 6:19 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ನ ಪ್ರೇಮ ಪಕ್ಷಿಗಳು ಎಂದೇ ಕರೆಯಿಸಿಕೊಳ್ಳುತ್ತಿರುವ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯ ಬಗ್ಗೆ ಆಲಿಯಾ ತಾಯಿ ಸೋನಿ ರಾಜ್ದಾನ್‌ ಮಾತನಾಡಿದ್ದಾರೆ.

ಆಲಿಯಾ ಮದುವೆಯ ದಿನಾಂಕ ಇನ್ನು ನಿಗದಿಯಾಗಿಲ್ಲ, ಈ ಬಗ್ಗೆ ಆಲಿಯಾ ಕೂಡ ನಮ್ಮ ಜೊತೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಎಂದು ಸೋನಿ ರಾಜ್ದಾನ್‌ ಹೇಳಿದ್ದಾರೆ.

ಕಳೆದ ತಿಂಗಳುರಣಬೀರ್-ಆಲಿಯಾ ಜತೆಯಾಗಿ ರಾಜಸ್ಥಾನದ ಜೋಧ್‌ಪುರ್‌ಗೆ ತೆರಳಿದ್ದರು. ಅದ್ದೂರಿಯಾಗಿ ವಿವಾಹ ಮಾಡಿಕೊಳ್ಳುವ ಸಲುವಾಗಿ ಈ ಜೋಡಿ ಸೂಕ್ತ ಸ್ಥಳ ನೋಡಲು ಅಲ್ಲಿಗೆ ತೆರಳಿದ್ದರು ಎಂಬ ಮಾತುಗಳು ಹರಿದಾಡಿದ್ದವು. ಆದರೆ ರಣಬೀರ್‌ ಹಾಗೂ ಆಲಿಯಾ ಕಡೆಯಿಂದ ಯಾವುದೇ ಮದುವೆ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

ರಣಬೀರ್‌ 2020ರಲ್ಲಿ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೋವಿಡ್‌ ಕಾರಣದಿಂದಾಗಿ ಮದುವೆಯನ್ನು ಮುಂದೂಡಲಾಗಿತ್ತು. ಶೀಘ್ರದಲ್ಲೇ ರಣಬೀರ್‌ ಮದುವೆ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT