ಗುರುವಾರ , ಮೇ 6, 2021
23 °C

ವಿಭಿನ್ನ ಪಾತ್ರದಲ್ಲಿ ಶ್ರೀನಗರ ಕಿಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಿನಿಮಾದಿಂದ ಕೆಲ ಕಾಲ ದೂರವಿದ್ದ ನಟ ಶ್ರೀನಗರ ಕಿಟ್ಟಿ ಇದೀಗ ಮತ್ತೆ ತೆರೆಯ ಮೇಲೆ ವಿಭಿನ್ನ ಪಾತ್ರದ ಮುಖಾಂತರ ಬರಲು ಸಜ್ಜಾಗಿದ್ದಾರೆ.

‘ಇಂತಿ ನಿನ್ನ ಪ್ರೀತಿಯ’, ‘ಸವಾರಿ’, ‘ಹುಡುಗರು’ ಹೀಗೆ ಹಲವು ಹಿಟ್ ಚಿತ್ರಗಳಲ್ಲಿ ಲವರ್‌ಬಾಯ್‌ ಪಾತ್ರದ ಮುಖಾಂತರ ಚಂದನವನದಲ್ಲಿ ತನ್ನದೇ ಛಾಪು ಮೂಡಿಸಿದ್ದ ಶ್ರೀನಗರ ಕಿಟ್ಟಿ, ಇದೀಗ ರಫ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋಹನ್‌ ಫಿಲ್ಮ್‌ ಫ್ಯಾಕ್ಟರಿಯು ತನ್ನ ಮೊದಲ ಚಿತ್ರ ‘ಗೌಳಿ’ಯ ಪೋಸ್ಟರ್‌ ಬಿಡುಗಡೆ ಮಾಡಿದ್ದು, ಸೂರಾ ಎಸ್‌. ಇದನ್ನು ನಿರ್ದೇಶಿಸುತ್ತಿದ್ದಾರೆ. ರಘು ಸಿಂಗಂ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. 

ಪ್ರಸ್ತುತ ಗರುಡ ಹಾಗೂ ಅವತಾರ ಪುರುಷ ಚಿತ್ರದ ಚಿತ್ರೀಕರಣದಲ್ಲಿ ಶ್ರೀನಗರ ಕಿಟ್ಟಿ ಅವರು ತೊಡಗಿಸಿಕೊಂಡಿದ್ದು, ಶೀಘ್ರದಲ್ಲೇ ಗೌಳಿ ಚಿತ್ರದ ಚಿತ್ರೀಕರಣವೂ ಆರಂಭವಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು