ಶ್ರೀರಂಗಪಟ್ಟಣ: ‘ಸಿನಿಮಾಗಳು ಪ್ರಸಕ್ತ ಸಾಮಾಜಿಕ ತಲ್ಲಣಗಳಿಗೆ ಕನ್ನಡಿ ಹಿಡಿದು ಸಕಾರಾತ್ಮಕ ಪರಿವರ್ತನೆಗೆ ಪ್ರೇರಣೆ ನೀಡಬೇಕು’ ಎಂದು ಹಿರಿಯ ರಂಗಕರ್ಮಿ ಹಾಗೂ ಗಮ್ಯ ರಂಗ ತಂಡದ ಮುಖ್ಯಸ್ಥ ಚ. ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ಬಾಬುರಾಯನಕೊಪ್ಪಲು ಸಮೀಪದ ಐತಿಹಾಸಿಕ ಮಣಿಕರ್ಣಿಕಾ ಗುಂಜಾ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಆರಂಭವಾದ ‘ದುಡ್ಡಿನ ಆಟ ಬಲ್ಲವರಾರು’ ಚಲನಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಸದಭಿರುಚಿ ಮತ್ತು ಸಾಮಾಜಿಕ ಕಳಕಳಿಯ ಚಲನಚಿತ್ರಗಳು ಕಡಿಮೆಯಾಗುತ್ತಿವೆ ಎಂಬ ಅಪವಾದಗಳು ಕೇಳಿ ಬರುತ್ತಿವೆ. ಪ್ರಗತಿಗೆ ಮಾರಕವಾದ ಮೌಢ್ಯಾಚರಣೆ, ವರದಕ್ಷಿಣೆ ಪಿಡುಗು, ಬಾಲ್ಯ ವಿವಾಹ, ಅನಕ್ಷರತೆ, ನಿರುದ್ಯೋಗ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರೇಕ್ಷಕರಿಗೆ ಮನರಂಜನೆ ನೀಡುವ ಜತೆಗೆ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು’ ಎಂದರು.

ಚಲನಚಿತ್ರ ನಿರ್ದೇಶಕ ಎಸ್.ಕೆ. ಬಾಬು ಬೆಳಗೊಳ ಮಾತನಾಡಿ, ‘ಮೈಸೂರು ಫಿಲಂ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಹಣವೇ ಪ್ರಧಾನವಾದರೆ ಏನೆಲ್ಲ ಸಮಸ್ಯೆಗಳು ಉದ್ಭವಿಸುತ್ತವೆ ಎಂಬ ಸಂದೇಶ ದುಡ್ಡಿನ ಆಟ ಬಲ್ಲವರಾರು ಚಿತ್ರದ ತಿರುಳು. ರಂಗಭೂಮಿ ನಂಟಿರುವ ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಗ್ರಾಮೀಣ ಪ್ರತಿಭೆಗಳೇ ಇಲ್ಲಿ ಪಾತ್ರಧಾರಿಗಳು. ಅತ್ಯಂತ ಕಡಿಮೆ ಹಣದಲ್ಲಿ ಸಿನೆಮಾ ಮಾಡಲು ಯೋಜನೆ ರೂಪಿಸಿದ್ದು, ಮುಂಬರುವ ಅಕ್ಟೋಬರ್ಗೆ ಈ ಚಿತ್ರ ತೆರೆ ಕಾಣಲಿದೆ’ ಎಂದು ತಿಳಿಸಿದರು.

ಕಲಾವಿದರಾದ ಪ್ರಸಾದ್, ಸುರೇಶ್ ಗೋಲ್ಡ್ , ಚಂದಗಾಲು ಶಂಕರ್, ಸೌಮ್ಯಾ, ಪ್ರಿಯಾ, ಪಲ್ಲವಿ, ನೀತು, ಲೋಕೇಶ್, ಪುರುಷೋತ್ತಮ, ಸಾಹಿತಿ ಯಡಿಯೂರು ಸಮೀಉಲ್ಲಾ, ಎಚ್.ವಿ. ಪುಟ್ಟಸ್ವಾಮಿ, ವಕೀಲ ಸಿ.ಎಸ್. ವೆಂಕಟೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-40-1267586062

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.