ಶುಕ್ರವಾರ, ನವೆಂಬರ್ 27, 2020
19 °C

ಬಿಜೆಪಿ ನಾಯಕರಿಂದ ನಿರ್ದೇಶಕ ರಾಜಮೌಳಿಗೆ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆರ್‌ಆರ್‌ಆರ್ ಸಿನಿಮಾದ ಜೂನಿಯರ್‌ ಎನ್‌ಟಿಆರ್ ಪಾತ್ರದ ಪರಿಚಯಕ್ಕಾಗಿ ಇತ್ತೀಚೆಗೆ ಟೀಸರ್‌ ಒಂದನ್ನು ಬಿಡುಗಡೆ ಮಾಡಿದ್ದರು ನಿರ್ದೇಶಕ ರಾಜಮೌಳಿ. ಟೀಸರ್‌ನಲ್ಲಿ ಜೂನಿಯರ್ ಎನ್‌ಟಿಆರ್ ಧರಿಸಿದ್ದ ‘ಸ್ಕಲ್‌ ಕ್ಯಾಪ್’ (ಮುಸ್ಲಿಮರು ಧರಿಸುವ ಸಾಂಪ್ರದಾಯಿಕ ಟೋಪಿ) ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿ ನಾಯಕರೊಬ್ಬರಿಂದ ಈ ವಿಷಯಕ್ಕೆ ಸಂಬಂಧಿಸಿ ಬೆದರಿಕೆಯ ಸಂದೇಶಗಳು ಬಂದಿವೆ ಎನ್ನಲಾಗುತ್ತಿದೆ.

ಇನ್ನೂ ಸಿನಿಮಾದ ಶೂಟಿಂಗ್‌ ಕೆಲಸಗಳು ಪೂರ್ತಿಯಾಗಿಲ್ಲ. ಆದರೆ ಎನ್‌ಟಿಆರ್ ಪಾತ್ರದ ಪರಿಚಯಕ್ಕಾಗಿ ಬಿಡುಗಡೆ ಮಾಡಿದ್ದ ಟೀಸರ್‌ನಲ್ಲಿ ಕೋಮರಾಮ್ ಭೀಮ್‌ ಪಾತ್ರದಲ್ಲಿ ಜೂನಿಯರ್ ಎನ್‌ಟಿಆರ್ ಸ್ಕಲ್‌ ಕ್ಯಾಪ್ ಧರಿಸಿದ್ದರು. 

ಈ ಹಿಂದೆ ‘ಪದ್ಮಾವತಿ’ ಚಿತ್ರದ ಶೀರ್ಷಿಕೆಗೆ ಸಂಬಂಧಿಸಿ ಸಂಜಯ್ ಲೀಲಾ ಬನ್ಸಾಲಿ ಕೂಡ ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸಿದ್ದರು. ಯಶಸ್ವಿ ನಿರ್ದೇಶಕ ರಾಜಮೌಳಿ ಇಂತಹ ದೃಶ್ಯ, ಶೀರ್ಷಿಕೆ ಹಾಗೂ ಸಂಭಾಷಣೆಗಳಿಂದಾಗುವ ವಿವಾದಗಳನ್ನು ಚೆನ್ನಾಗಿ ಬಲ್ಲರಾಗಿದ್ದಾರೆ. ಹಾಗಾಗಿ ಈ ಟೀಸರ್‌ ಸಂಬಂಧಿಸಿ ತಮ್ಮ ಆಪ್ತರ ಬಳಿ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಆರ್‌ಆರ್‌ಆರ್‌ ಸಿನಿಮಾವು ಸ್ವಾತಂತ್ರ್ಯ ಹೋರಾಟಗಾರರಾದ ಕೋಮರಾಮ್‌ ಭೀಮ್‌ ಹಾಗೂ ಅಲ್ಲೂರಿ ಸೀತಾರಾಮ ರಾಜು ಅವರ ನಡುವಿನ ಸ್ನೇಹದ ಕಥೆಯನ್ನು ಹೊಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು