ಭಿನ್ನವಾದ ಪಾತ್ರಗಳ ಮೂಲಕ ಇತ್ತೀಚೆಗೆ ಸದ್ದು ಮಾಡುತ್ತಿರುವ ನಟ ಮಿತ್ರ, ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ದಲ್ಲೂ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದಾರೆ.

ಅವರ ಜನ್ಮದಿನದಂದು ಚಿತ್ರತಂಡ ಮಿತ್ರ ಅವರ ಪಾತ್ರದ ಫಸ್ಟ್ಲುಕ್ ಬಿಡುಗಡೆ ಮಾಡಿದೆ. 2003ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಮಿತ್ರ ಹಿರಿತೆರೆ, ಕಿರುತೆರೆಯಲ್ಲೂ ಮಿಂಚಿದವರು. ‘ಮನಸಾರೆ’, ‘ಪಂಚರಂಗಿ’ ಹೀಗೆ ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಪಾತ್ರಗಳು ಹಾಸ್ಯಪ್ರಧಾನವಾಗಿದ್ದರೂ, ಬದಲಾವಣೆಗೆ ತೆರೆದುಕೊಂಡು ‘ಲ್ಯಾಂಡ್ಲಾರ್ಡ್’ನಲ್ಲಿ ತಮ್ಮ ನಟನೆಯ ಸಾಮರ್ಥ್ಯ ಪ್ರದರ್ಶಿಸಿದವರು.

ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರ ಕೈಯಲ್ಲಿ ಪಿ.ಸಿ.ಶೇಖರ್ ನಿರ್ದೇಶನದ ‘ಮಹಾನ್’, ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾಗಳಿದ್ದು, ಇವು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈ ಸಂದರ್ಭದಲ್ಲೇ ‘ಲಕ್ಷ್ಮೀಪುತ್ರ’ದಲ್ಲಿನ ಅವರ ಪಾತ್ರವನ್ನು ಪರಿಚಯಿಸಲಾಗಿದ್ದು, ಮತ್ತೆ ಹಾಸ್ಯ ಪಾತ್ರದತ್ತ ಮಿತ್ರ ಹೊರಳಿದಂತಿದೆ. ವಿಜಯ್ ಸ್ವಾಮಿ ಆ್ಯಕ್ಷನ್ ಕಟ್ ಹೇಳಿರುವ ಈ ಸಿನಿಮಾವನ್ನು ನಿರ್ದೇಶಕ ಎ.ಪಿ.ಅರ್ಜುನ್ ನಿರ್ಮಾಣ ಮಾಡಿದ್ದು, ತಾರಾ, ಕುರಿ ಪ್ರತಾಪ್, ಧರ್ಮಣ್ಣ ಸೇರಿ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ವಂದಿತಾ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-146223659

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.