‘ಸು ಫ್ರಂ ಸೋ’ ಸಿನಿಮಾ ಮೂಲಕ ಖ್ಯಾತಿ ಪಡೆದ ನಟ, ನಿರ್ದೇಶಕ ಜೆ.ಪಿ.ತೂಮಿನಾಡು ಅವರು ರಶ್ಮಿಕಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಸದ್ಯ ಇವರ ಮದುವೆಯ ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಕರಾವಳಿ ಮೂಲದ ನಟರಾದ ಜಯ ಪ್ರಕಾಶ್ ತೂಮಿನಾಡು ಅವರು ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ನಟ, ನಿರ್ದೇಶಕ ಹಾಗೂ ಬರಹಗಾರರಾಗಿ ಕೆಲ ಮಾಡುತ್ತಿದ್ದಾರೆ. 2025 ರಲ್ಲಿ ತಮ್ಮ ಮೊದಲ ನಿರ್ದೇಶನದಲ್ಲಿ ಮೂಡಿ ಬಂದ ‘ಸು ಫ್ರಂ ಸೋ’ ಚಿತ್ರದ ಮೂಲಕ ಖ್ಯಾತಿ ಗಳಿಸಿದರು. ಮಾತ್ರವಲ್ಲದೆ, ಇದೇ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಇದಕ್ಕೂ ಮೊದಲು ಜೆ.ಪಿ.ತೂಮಿನಾಡು ಅವರು ‘ಸಪ್ತ ಸಾಗರದಾಚೆ ಎಲ್ಲೋ’, ಸೈಡ್ ಬಿ, ‘ಸ್ವಾತಿ ಮುತ್ತಿನ ಮಳೆ ಹನಿಯೇ’, ‘ಕಥಾಸಂಗಮ’ ಹಾಗೂ ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇವರು ‘ಮಜಾ ಭಾರತ’ ಕಾಮಿಡಿ ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಂಡಿದ್ದರು.

ರಾಜ್ ಬಿ. ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿಬಂದ 'ಒಂದು ಮೊಟ್ಟೆಯ ಕಥೆ' ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.

ಪ್ರಜಾವಾಣಿಯೊಂದಿಗಿನ ಸಂದರ್ಶನದಲ್ಲಿ ತಮ್ಮ ವೃತ್ತಿ ಜೀವನದ ಕುರಿತು ಮಾತನಾಡಿದ್ದ ಜೆ.ಪಿ.ತೂಮಿನಾಡು ಅವರು, ‘ ರಾಜ್.ಬಿ ಶೆಟ್ಟಿ ಅವರನ್ನು ಭೇಟಿಯಾದ ನಂತರ ನನಗೆ ಹೊಸ–ಹೊಸ ಕಥೆಗಳ ಐಡಿಯಾಗಳು ಸಿಕ್ಕವು. ಕಥೆಯನ್ನು ನೋಡುವ ದೃಷ್ಟಿಕೋನ, ಅದನ್ನು ಸೆರೆ ಹಿಡಿಯುವ ಮಾದರಿ ಎಲ್ಲವನ್ನೂ ಅವರಿಂದ ಕಲಿತೆ ಎಂದು ಹೇಳಿಕೊಂಡಿದ್ದರು.

ಸು ಫ್ರಂ ಸೋ ಅಲ್ಲಿ ಅಶೋಕನ ಪಾತ್ರ

ಸು ಫ್ರಂ ಸೋ ಸಿನಿಮಾದಲ್ಲಿ ಅಶೋಕನ ಪಾತ್ರ ಅಭಿಮಾನಿಗಳು ಮನಗೆದ್ದಿದೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಹಾಸ್ಯ ಹಾಗೂ ಹಾರರ್ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ರಾಜ್.ಬಿ ಶೆಟ್ಟಿ ಅವರು ಸಲಹೆಯ ಮೇರೆಗೆ ಈ ಪಾತ್ರವನ್ನು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.