ಕಳೆದ ವರ್ಷ ತೆರೆಕಂಡಿದ್ದ ಜೆ. ಪಿ. ತೂಮಿನಾಡು ಅವರ ನಿರ್ದೇಶನದಲ್ಲಿ ಕನ್ನಡದಲ್ಲಿ ಮೂಡಿಬಂದಿದ್ದ ‘ಸು ಫ್ರಂ ಸೋ’ ಇದೀಗ ಮರಾಠಿ ಭಾಷೆಯಲ್ಲಿ ‘ತುಂಬಾಡಚಿ ಮಂಜುಳ’ ಎಂಬ ಶೀರ್ಷಿಕೆ ಅಡಿಯಲ್ಲಿ ರಿಮೇಕ್ ಮಾಡಲಾಗಿದೆ.

ಮರಾಠಿ ಭಾಷೆಯಲ್ಲಿ ತೆರೆ ಕಾಣಲಿರುವ ‘ತುಂಬಾಡ್ಚಿ ಮಂಜುಳಾ’ ಸಿನಿಮಾವನ್ನು ವಿವಿದ್ ಕೊರ್ಗಾಂವ್ಕರ್ ನಿರ್ದೇಶಿಸಿದ್ದಾರೆ. ಜೀ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸಿನಿಮಾದ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು, ಇದೇ ಜೂನ್ 5 ರಂದು ಸಿನಿಮಾ ಬಿಡುಗಡೆಯಾಗಲು ಸಿದ್ದವಾಗಿದೆ.

ಕಳೆದ ವರ್ಷ ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದ್ದ ಸು ಫ್ರಂ ಸೋ ಸಿನಿಮಾದ ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ, ಶನೀಲ್ ಗೌತಮ್, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾನಾಜೆ, ಮೈಮ್ ರಾಮದಾಸ್ ಮತ್ತು ಸಂಧ್ಯಾ ಅರೆಕರೆ ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿನ ಆಶೋಕ ಹಾಗೂ ರವಿ ಅಣ್ಣನ ಪಾತ್ರ ಅಭಿಮಾನಿಗಳ ಮನಗೆದ್ದಿತ್ತು.

ತುಂಬಾಡಚಿ ಮಂಜುಳ ಸಿನಿಮಾದ ಪ್ರಮುಖ ಪಾತ್ರದಲ್ಲಿ ಜಿತೇಂದ್ರ ಜೋಶಿ, ಓಂ ಭೂತ್ಕರ್, ಸಾಯಿ ತಮ್ಹಂಕರ್ರ್ ಮತ್ತು ಮಕರಂದ್ ಅನಾಸ್ಪುರೆ ಅವರು ಗುರೂಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.