ಸೋಮವಾರ, ಆಗಸ್ಟ್ 26, 2019
21 °C

ಯಾರ ಮೇಲೆ ‘ಪೈಲ್ವಾನ್‌’ ಕುಸ್ತಿ? ಸುದೀಪ್‌ ಟ್ವೀಟ್‌ ವೈರಲ್‌

Published:
Updated:

ನಟ ಸುದೀಪ್‌ ನಟನೆಯ ಕೃಷ್ಣ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಪೈಲ್ವಾನ್’ ಐದು ಭಾಷೆಗಳಲ್ಲಿ ಸೆಪ್ಟೆಂಬರ್‌ 12ರಂದು ಏಕಕಾಲಕ್ಕೆ ತೆರೆ ಕಾಣುತ್ತಿದೆ. ಚಿತ್ರಕ್ಕೆ ಸಂಬಂಧಿಸಿದಂತೆ ಪೋಸ್ಟರ್‌ಗಳು, ಮಾಹಿತಿ ಇತ್ಯಾದಿ ಕಿಚ್ಚನ ಟ್ವಿಟರ್‌ ವಾಲ್ ಅನ್ನು ಅಲಂಕರಿಸುವುದು ಸರ್ವೇ ಸಾಮಾನ್ಯ.  

ಈ ನಡುವೆಯೇ ಸುದೀಪ್‌ ‘ನಿಜವಾದ ಗಂಡಸು ಎಂದು ಸಾಬೀತುಪಡಿಸಲು ಮದ್ಯ ಬೇಕಿಲ್ಲ; ಸೂರ್ಯ ಮುಳುಗುವುದು ಬೇಕಾಗಿಲ್ಲ’ ಎಂದು ಟ್ವೀಟ್‌ ಮಾಡಿರುವುದು ವೈರಲ್‌ ಆಗಿದೆ. ಯಾರನ್ನು ಕುರಿತು ಕಿಚ್ಚ ಈ ಟ್ವೀಟ್‌ ಮಾಡಿದ್ದಾರೆ ಎಂಬ ಬಗ್ಗೆಯೂ ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆ ನಡೆಯುತ್ತಿದೆ. 

‘ನನ್ನ ಸಾಮರ್ಥ್ಯವನ್ನು ಒರೆಗೆ ಹಚ್ಚಲು ನಾನು ರಣಾಂಗಣದಲ್ಲಿ ಹೋರಾಟಕ್ಕೆ ಇಳಿಯುವುದಿಲ್ಲ. ಎದುರಾಳಿ ಯುದ್ಧ ಮಾಡಲು ಎಷ್ಟು ಅರ್ಹನಾಗಿದ್ದಾನೆ ಎನ್ನುವುದರ ಮೇಲೆ ಹೋರಾಟಕ್ಕೆ ಇಳಿಯುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

Post Comments (+)