ಗುರುವಾರ , ಆಗಸ್ಟ್ 22, 2019
23 °C

ಇಂಗ್ಲಿಷ್‌ ಕಿರುಚಿತ್ರದಲ್ಲಿ ಸುಹಾನಾ ಖಾನ್‌

Published:
Updated:
Prajavani

ನಟ ಶಾರುಖ್‌ ಪುತ್ರಿ ಸುಹಾನಾ ಖಾನ್‌ ನಟನಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ. ಕಿರುಚಿತ್ರವೊಂದರಲ್ಲಿ ನಟಿಸಲು ಸುಹಾನಾ ಒಪ್ಪಿಗೆ ನೀಡಿದ್ದು, ಇದರ ಪೋಸ್ಟರ್‌ ಬಿಡುಗಡೆಯಾಗಿದೆ.

ಸುಹಾನಾ ನಟನೆಗೆ ಕಾಲಿಡುತ್ತಿರುವುದು ಇಂಗ್ಲಿಷ್‌ ಕಿರುಚಿತ್ರದ ಮೂಲಕ. ಇದರ ಶೀರ್ಷಿಕೆ ‘ದಿ ಗ್ರೇ ಪಾರ್ಟ್‌ ಆಫ್‌ ಬ್ಲೂ’. ಇದನ್ನು ಥಿಯೊಡೆರ್ ಜಿಮೆನೊ ನಿರ್ದೇಶನ ಮಾಡುತ್ತಿದ್ದಾರೆ. ಈ ಸುದ್ದಿಯನ್ನು ಸ್ವತಃ ಜಿಮೆನೊ ಸ್ಪಷ್ಟಪಡಿಸಿದ್ದು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಿರುಚಿತ್ರದ ಪೋಸ್ಟರ್‌ ಅನ್ನು ಹಂಚಿಕೊಂಡಿದ್ದಾರೆ.

ಸುಹಾನಾ ನಟಿಸಿರುವ ಫೋಟೊಗಳನ್ನು ನಿರ್ದೇಶಕ ಹಂಚಿಕೊಂಡಿದ್ದಾರೆ. ಕಳೆದ ಜೂನ್‌ ತಿಂಗಳಲ್ಲಿ  ನಟನೆ ಕುರಿತಾದ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ ಸುಹಾನಾ. ಅವರು ಕಾಲೇಜಿನಲ್ಲಿ ಅಭಿನಯಿಸಿರುವ ನಾಟಕಗಳ ದೃಶ್ಯಗಳು ಹಾಗೂ ಆಕೆಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ಇತ್ತೀಚೆಗೆ ಸುಹಾನಾ ಬಾಲಿವುಡ್‌ ಪ‍್ರವೇಶದ ಬಗ್ಗೆ ಗಾಳಿಸುದ್ದಿಗಳು ಹರಿದಾಡುತ್ತಲೇ ಇವೆ.

Post Comments (+)