ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಹಾನಾ ಖಾನ್ ಮನ ಮಿಡಿಯುವ ಪತ್ರ...

ಅಮ್ಮನಿಗೆ ಮನ ಮಿಡಿಯುವ ಪತ್ರ ಬರೆದು ಶಾರುಕ್ ಮಗಳು ಸುಹಾನ
Last Updated 14 ಮೇ 2019, 19:30 IST
ಅಕ್ಷರ ಗಾತ್ರ

ಈ ಬಾರಿಯ ತಾಯಂದಿರ ದಿನಕ್ಕೆ ಬಾಲಿವುಡ್‌ ತಾರೆಯರು ತಮ್ಮ ಅಮ್ಮಂದಿರ ಜತೆಗಿರುವ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ, ಟ್ವಿಟರ್ ಖಾತೆಗಳಿಗೆ ಹಾಕಿಕೊಂಡು ಸಂಭ್ರಮಿಸಿದರು. ಖ್ಯಾತ ತಾರೆಯರ ಮಕ್ಕಳು ತಾವೂ ಕಮ್ಮಿ ಇಲ್ಲ ಎಂಬಂತೆ ಫೋಟೊಗಳನ್ನು ಹಂಚಿಕೊಂಡಿದರು. ಈ ಎಲ್ಲದರ ನಡುವೆ ಶಾರುಖ್ ಖಾನ್ ಮತ್ತು ಗೌರಿ ಖಾನ್ ಮಗಳು ಸುಹಾನಾ ಖಾನ್ ಭಿನ್ನತೆ ಮೆರೆದಿದ್ದಾಳೆ.

ಲಂಡನ್‌ನಲ್ಲಿ ಓದುತ್ತಿರುವ ಸುಹಾನಾ ತಾಯಂದಿರ ದಿನಕ್ಕೆ ತನ್ನಮ್ಮ ಗೌರಿ ಬಗ್ಗೆ ಮನಮಿಡಿಯುವ ಪತ್ರವೊಂದನ್ನು ಬರೆದಿದ್ದಾಳೆ. ಮುದ್ದುಮಗಳ ಪ್ರೀತಿ ತುಂಬಿದ ಮಾತುಗಳನ್ನು ಗೌರಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ತಾಯಿ ನಮ್ಮ ದೊಡ್ಡ ಗುರು. ಸಹಾನುಭೂತಿ, ಪ್ರೀತಿ ಮತ್ತು ನಿರ್ಭಯತೆಯ ಗುರು ಆಕೆ. ಪ್ರೀತಿ ಅನ್ನುವುದು ಸಿಹಿ ತುಂಬಿದ್ದ ಹೂವಾಗಿದ್ದರೆ, ತಾಯಿ ಕೂಡಾ ಪ್ರೀತಿಯ ಸಿಹಿ ತುಂಬಿದ ಹೂವಿನಂತೆ. ತಾಯಂದಿರ ದಿನದ ಶುಭಾಶಯಗಳು’ ಎಂದು ಸುಹಾನಾ ಭಾವುಕವಾಗಿ ಬರೆದಿದ್ದಾಳೆ.

ಸುಹಾನಾ ಇನ್ನೂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿಲ್ಲವಾದರೂ, ಸುಹಾನಾಳ ಚಿತ್ರಗಳು ಮತ್ತು ವಿಡಿಯೊಗಳು ಸದಾ ವೈರಲ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ, ಸಂಜಯ್ ಕಪೂರ್ ಮಗಳು ಶಾನಾಯಾ ಜತೆಗೆ ಸುಹಾನ ಆಗಾಗ್ಗೆ ಹೊರಗೆ ತಿರುಗಾಡುವುದುಂಟು. ಈಗಾಗಲೇ ಅನನ್ಯಾ ‘ಸ್ಟೂಡೆಂಟ್ ಆಫ್ ದಿ ಇಯರ್ 2’ ಸಿನಿಮಾದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾಳೆ.

ತೀರಾ ಇತ್ತೀಚೆಗೆ ಅಂದರೆ ಏಪ್ರಿಲ್‌ ತಿಂಗಳಿನಲ್ಲಿ ಟ್ಯೂಬ್ ಟಾಪ್ ಮೇಲಂಗಿ ಮತ್ತು ಕಪ್ಪು ಪ್ಯಾಂಟ್ ತೊಟ್ಟು ದೊಡ್ಡ ನಗೆ ಚೆಲ್ಲಿದ್ದ ಸುಹಾನಾಳ ಚಿತ್ರ ವೈರಲ್ ಆಗಿತ್ತು. ಹಿಂದಿನ ವರ್ಷ ‘ವೋಗ್’ ಪತ್ರಿಕೆ ಸುಹಾನಾಳ ಗ್ಲ್ಯಾಮರಸ್ ಫೋಟೊ ಶೂಟ್ ನಡೆದಿತ್ತು. ಈ ಬಗ್ಗೆ ಬೇಸರಗೊಂಡಿದ್ದ ಸುಹಾನಾಳ ತಂದೆ ಶಾರುಖ್ ಖಾನ್, ‘ಸುಹಾನಾ ಇನ್ನೂ ಏನನ್ನೂ ಸಾಧಿಸಿಲ್ಲ. ಆಗಲೇ ಅವಳಿಗೆ ಪತ್ರಿಕೆಯ ಮುಖಪುಟದಲ್ಲಿ ಸ್ಥಾನ ನೀಡಿದ್ದೀರಿ’ ಎಂದು ಗರಂ ಆಗಿದ್ದರು. ಏನೇ ಇರಲಿ ಸುಹಾನಾ ಕುಂತರೂ, ನಿಂತರೂ ಬಾಲಿವುಡ್‌ನಲ್ಲಂತೂ ಸುದ್ದಿಯಾಗುತ್ತಲೇ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT