‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ಎಂದಾಕ್ಷಣ ರಾಜ್ ಬಿ.ಶೆಟ್ಟಿ ಹೆಸರು ಕೇಳಿಬರುತ್ತದೆ. ಆದರೆ ಈ ಸಿನಿಮಾವನ್ನು ನಿರ್ದೇಶಿಸಿದ್ದು ಸುಜಯ್ ಶಾಸ್ತ್ರಿ ಎಂದರೆ ‘ಹೌದಾ’ ಎಂಬ ಉದ್ಗಾರ ಕೇಳಿಬರುತ್ತದೆ. ಯುಟ್ಯೂಬ್ನಲ್ಲಿ ‘ನೊಂದ ನಾಣಿ’ಯಾಗಿ ವೀಕ್ಷಕರನ್ನು ನಗಿಸಿದ ನಟ, ನಿರ್ದೇಶಕ ಸುಜಯ್ ಶಾಸ್ತ್ರಿ ನಿರ್ದೇಶನದ ‘ಎಲ್ರ ಕಾಲೆಳಿಯತ್ತೆ ಕಾಲ’ ಇಂದು (ಏ.24) ತೆರೆಕಂಡಿದೆ. ಈ ಸಂದರ್ಭದಲ್ಲಿ ತಮ್ಮ ಸಿನಿಮಾ, ಹಾಸ್ಯ ಪ್ರಧಾನ ಸಿನಿಮಾಗಳ ಕೊರತೆ ಬಗ್ಗೆ ಅವರು ಮಾತನಾಡಿದರು.

‘ಇತ್ತೀಚೆಗೆ ಯಾವ ಸಿನಿಮಾ ನೋಡಿದಿರಿ ಎಂದು ಕೇಳಿದರೆ, ಹೆಚ್ಚಿನವರು ‘ಧುರಂಧರ್’ ಎನ್ನುತ್ತಾರೆ. ಆದರೆ ಇಂತಹ ಸಿನಿಮಾಗಳು ಇರುವುದು ಒಂದು ವರ್ಗದ ಪ್ರೇಕ್ಷಕರಿಗೆ. ನಮ್ಮಲ್ಲಿ ಹೆಚ್ಚಿನ ಪ್ರೇಕ್ಷಕರು ಇಷ್ಟಪಡುವುದು ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾಗಳನ್ನು. ಇಂತಹ ಸಿನಿಮಾಗಳು ಗೆದ್ದ ಉದಾಹರಣೆಗಳೂ ಸಾಕಷ್ಟಿವೆ. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾವನ್ನು ನಾನು ನಿರ್ದೇಶಿಸಿದ್ದೇನೆ ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲದಿದ್ದರೂ ನಾನು ಅದರಲ್ಲಿ ನಟಿಸಿದ್ದೆ ಎನ್ನುವುದು ಗೊತ್ತು. ಎಷ್ಟೋ ಜನ ರಾಜ್ ಅವರೇ ಈ ಸಿನಿಮಾ ನಿರ್ದೇಶಿಸಿದ್ದಾರೆ ಎಂದುಕೊಂಡಿದ್ದಾರೆ. ಈ ಪ್ರೇಕ್ಷಕ ವರ್ಗಕ್ಕೆ ಇಂತಹ ಫೀಲ್ಗುಡ್ ಹಾಸ್ಯ ಸಿನಿಮಾಗಳ ಹರಿವು ಮುಖ್ಯವಾಗಿದೆ’ ಎನ್ನುತ್ತಾರೆ ಸುಜಯ್.

‘ಹಿಂದೆ ಹಾಸ್ಯ ಪ್ರಧಾನ ಚಿತ್ರಗಳು, ಪಾತ್ರಗಳನ್ನು ಮಾಡಲು ಒಂದು ಕಲಾವಿದರ ತಂಡವೇ ಇತ್ತು. ಸದ್ಯದ ಬೆಳವಣಿಗೆಯಲ್ಲಿ ಕಲಾವಿದರು ನಾಲ್ಕೈದು ಸಿನಿಮಾಗಳ ಬಳಿಕ ನಾಯಕರಾಗುತ್ತಿದ್ದಾರೆ, ನಿರ್ದೇಶನಕ್ಕೂ ಇಳಿಯುತ್ತಿದ್ದಾರೆ! ಪ್ರಸ್ತುತ ನಿಜವಾದ ತಿಳಿಹಾಸ್ಯ ಮರೆಯಾಗುತ್ತಿದೆ. ಇಂತಹ ಹಾಸ್ಯವೇ ಜನರ ಮನಸ್ಸಿನಲ್ಲಿ ಸದಾ ಅಚ್ಚೊತ್ತಿರುತ್ತದೆ. ಉದಾಹರಣೆಗೆ ಇಂದಿಗೂ ಜನ ನನ್ನನ್ನು ‘ಉಪ್ಪಿಟ್ಟು ಫೋರ್ಕ್’ ಎಂದೇ ಕೇಳುತ್ತಾರೆ. ಈ ರೀತಿಯ ತಿಳಿಹಾಸ್ಯದ ಬರವಣಿಗೆಯೂ ಕಡಿಮೆಯಾಗಿದೆ. ಸೌಂದರ್ಯದ ಅವಹೇಳನ, ಹೆಣ್ಣಿಗೆ ಅಗೌರವ, ಮದ್ಯದ ಪ್ರಚೋದನೆ ಆಗುವಂತಹ ಅಂಶಗಳು ನನ್ನ ಸಿನಿಮಾಗಳಲ್ಲಿ ಇರುವುದಿಲ್ಲ’ ಎಂದರು.

‘ನಾಣಿ’ಗೇನಾಯಿತು?

‘ನಿಮ್ಮ ‘ನೊಂದ ನಾಣಿ’ ಯುಟ್ಯೂಬ್ ವಿಡಿಯೊ ಸರಣಿ ನಿಲ್ಲಿಸಿದ್ದೇಕೆ’ ಎನ್ನುವ ಪ್ರಶ್ನೆಗೆ, ‘ಆರಂಭದಲ್ಲಿ ನನ್ನ ‘ನೊಂದ ನಾಣಿ’ ವೇಷ ನೋಡಿ ಮನೆಯಲ್ಲೇ ವಿರೋಧ ಬಂತು. ನಂತರದಲ್ಲಿ ನನ್ನ ಅಪ್ಪ–ಅಮ್ಮನೇ ದಯವಿಟ್ಟು ವಿಡಿಯೊ ಮಾಡು ಎಂದರು. ನಾನು ಮಾಡಿದ ವಿಡಿಯೊಗಳನ್ನು ಹಲವರು ನಕಲು ಮಾಡಿ ತಮ್ಮ ತಮ್ಮ ಪೇಜ್ಗಳಲ್ಲಿ ಹಾಕಿಕೊಳ್ಳುತ್ತಿದ್ದರು. ನನಗೆ 1–2 ಲಕ್ಷ ವ್ಯೂವ್ಸ್ ಬಂದರೆ ಅವರ ಪೇಜ್ಗಳಲ್ಲಿ ಕೋಟ್ಯಂತರ ವ್ಯೂವ್ಸ್ ಬರುತ್ತಿತ್ತು. ಈ ರೀತಿ ಕೃತಿಚೌರ್ಯವಾದಾಗ ಬೇಸರವಾಯಿತು. ಹೀಗಾಗಿ ನಿಲ್ಲಿಸಿದೆ’ ಎಂದರು.

‘ಹಾಸ್ಯ ಎನ್ನುವುದು ಸಾರ್ವಕಾಲಿಕ. ಹಾಸ್ಯ ಪುಸ್ತಕಗಳು, ಸಿನಿಮಾಗಳು, ಕಾರ್ಯಕ್ರಮಗಳು ಸರಿಯಾದ ರೀತಿಯಲ್ಲಿ ಪ್ರಚಲಿತದಲ್ಲಿರಬೇಕು. ಹಾಸ್ಯದ ಹೆಸರಿನಲ್ಲಿ ಚೇಷ್ಟೆ ಮಾಡಿದರೆ ಆಗುವುದಿಲ್ಲ. ಸಮಯಕ್ಕೆ ನೀವು ಗೌರವ ಕೊಡದೇ ಇದ್ದರೆ ಸಮಯವೂ ಗೌರವ ಕೊಡುವುದಿಲ್ಲ ಎನ್ನುವುದನ್ನು ‘ಎಲ್ರ ಕಾಲೆಳಿಯತ್ತೆ ಕಾಲ’ ಸಿನಿಮಾದಲ್ಲಿ ಹೇಳಿದ್ದೇವೆ. ನಿಜವಾದ ಹಾಸ್ಯಕ್ಕೆ ಗೌರವ ಕೊಡದೇ ಇದ್ದರೆ ಹಾಸ್ಯವು ನಿಮ್ಮನ್ನು ಅಚ್ಚುಕಟ್ಟಾಗಿ ತಿರಸ್ಕಾರ ಮಾಡುತ್ತದೆ. ‘ಎಲ್ರ ಕಾಲೆಳಿಯತ್ತೆ ಕಾಲ’ ಸಿನಿಮಾ ಸೆಟ್ಟೇರಿದ್ದು ನಾಲ್ಕು ವರ್ಷಗಳ ಹಿಂದೆ. ಈ ಅವಧಿಯು ಸಾಕಷ್ಟು ಅನುಭವ ನೀಡಿದೆ. ರೆಟ್ರೊ ಶೈಲಿಯಲ್ಲಿ ಈ ಸಿನಿಮಾವಿದ್ದು, ಸಾಂದರ್ಭಿಕವಾಗಿ ಹಾಸ್ಯ ಹುಟ್ಟುಹಾಕುವ ಸಾಮರ್ಥ್ಯ ಕಥೆಗಿದೆ. ನಾನೂ ಹಳ್ಳಿಯ ಓರ್ವ ಸದಸ್ಯನಾಗಿ ಬಣ್ಣಹಚ್ಚಿದ್ದೇನೆ’ ಎನ್ನುತ್ತಾರೆ ಸುಜಯ್.

‘ನಾನು ಹಾಸ್ಯ ನಟನಾಗಿ ಬೆರಳೆಣಿಕೆಯಷ್ಟೇ ಸಿನಿಮಾ ಮಾಡಿದ್ದೇನೆ. ಕನ್ನಡವನ್ನು ಬಿಟ್ಟು ಬೇರೆ ಎಲ್ಲೂ ಹೋಗಲ್ಲ ಎನ್ನುತ್ತಿದ್ದೆ. ಸದ್ಯ ಗೂಡಿನಿಂದ ಹಾರಿಹಾಗುವ ಪಕ್ಷಿಯ ರೀತಿ ಇದ್ದೇನೆ. ಯಾವುದೇ ಹೊಸಕಥೆ ಬರೆದಿಲ್ಲ. ನಾನು ನಿರ್ದೇಶಿಸಿರುವ, ನಿರ್ದೇಶಕ ಅನುರಾಗ್ ಕಶ್ಯಪ್ ನಟನೆಯ ‘8’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಸಿನಿಮಾದ ಸಂಕಲನ ನಡೆಯುತ್ತಿದೆ’ ಎನ್ನುತ್ತಾ ಮಾತಿಗೆ ವಿರಾಮವಿತ್ತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.