‘ರಾಮ ಚಕ್ಕನಿ ಸೀತಾ’ದಲ್ಲಿ ಪಕ್ಕದ್ಮನೆ ತೆಲುಗು ಹುಡುಗಿ ಸುಕೃತಾ ವಾಗ್ಲೆ

7
ಕಮರ್ಷಿಯಲ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ

‘ರಾಮ ಚಕ್ಕನಿ ಸೀತಾ’ದಲ್ಲಿ ಪಕ್ಕದ್ಮನೆ ತೆಲುಗು ಹುಡುಗಿ ಸುಕೃತಾ ವಾಗ್ಲೆ

Published:
Updated:
Prajavani

‘ಜಟ್ಟ’, ‘ಕಿರಗೂರಿನ ಗಯ್ಯಾಳಿಗಳು’ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದ ಸುಕೃತಾ ವಾಗ್ಲೆ ಈಗ ತೆಲುಗು ಚಿತ್ರರಂಗದಲ್ಲಿಯೂ ಮಿಂಚಲು ಸಜ್ಜಾಗಿದ್ದಾರೆ. 

ಶ್ರೀಹರ್ಷಂ ನಿರ್ದೇಶನದ ಇಂದ್ರ ನಾಯಕನಾಗಿ ನಟಿಸುತ್ತಿರುವ ‘ರಾಮ ಚಕ್ಕನಿ ಸೀತಾ’ ಸಿನಿಮಾದಲ್ಲಿ ಸುಕೃತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪಣಿಕಾಂತ್ ಹಣ ಹೂಡಿದ್ದಾರೆ. 

ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ನಿರ್ಮಾಪಕರು ಆಡಿಷನ್‌ ಬಗ್ಗೆ ಫೇಸ್‌ಬುಕ್‌ನಲ್ಲಿ ಪ್ರಕಟಣೆ ನೀಡಿದ್ದರು. ಆ ಪ್ರಕಟಣೆಯನ್ನು ನೋಡಿ ಆಡಿಷನ್‌ನಲ್ಲಿ ಭಾಗವಹಿಸಿದ ಸುಕೃತಾ ನಾಯಕಿಯ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಆಯ್ಕೆಯಾದ ನಂತರ ನೇರವಾಗಿ ಕ್ಯಾಮೆರಾ ಮುಂದೆ ಹೋಗಿ ನಿಂತುಕೊಂಡಿಲ್ಲ. ಬದಲಗೆ ಆ ಪಾತ್ರಕ್ಕೆ ಬೇಕಾಗುವ ಹಾವಭಾವ, ಭಾಷೆಯ ಬಳಕೆಯನ್ನು ಕಲಿತುಕೊಳ್ಳಲು ವರ್ಕ್‌ಷಾಪ್‌ನಲ್ಲಿ ಭಾಗವಹಿಸಿದ್ದಾರೆ. ‘ಚಿತ್ರದಲ್ಲಿ ಸ್ವಲ್ಪ ಸುದೀರ್ಘ ಸಂಭಾಷಣೆಗಳೂ ಇವೆ. ಹಾಗಾಗಿ ತೆಲುಗು ಭಾಷೆಯನ್ನು ಕಲಿತುಕೊಳ್ಳುವುದು ಅನಿವಾರ್ಯವಾಗಿತ್ತು’ ಎಂದು ವಿವರಿಸುತ್ತಾರೆ ಸುಕೃತಾ.

ಈಗಾಗಲೇ ಚಿತ್ರದ ಎಂಬತ್ತರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ. ಹಾಡುಗಳು ಮತ್ತು ಫೈಟ್ ದೃಶ್ಯಗಳ ಚಿತ್ರೀಕರಣ ಬಾಕಿ ಇದೆ. 

ಜಟ್ಟ, ಕಿರಗೂರಿನ ಗಯ್ಯಾಳಿಗಳು, ಮ್ಯಾಗಿ ಅಲಿಯಾಸ್‌ ಮೇಘ ಈ ಸಿನಿಮಾಗಳಲ್ಲಿ ಬೋಲ್ಡ್‌ ಹುಡುಗಿಯಾಗಿಯೇ ಕಾಣಿಸಿಕೊಂಡಿದ್ದ ಸುಕೃತಾ, ‘ರಾಮ ಚಕ್ಕನಿ ಸೀತಾ’ದಲ್ಲಿ ಪಕ್ಕದ್ಮನೆ ಹುಡುಗಿ ಅನಿಸುವಂಥ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ.

‘ನನಗೆ ಒಂದು ಕಮರ್ಷಿಯಲ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ನಟಿಸಬೇಕು ಎಂದು ಯಾವಾಗಲೂ ಅನಿಸುತ್ತಿತ್ತು. ಈ ಚಿತ್ರದಿಂದ ಅದು ಸಾಧ್ಯವಾಗಿದೆ. ಈ ಸಿನಿಮಾದ ಕಥೆ ಚೆನ್ನಾಗಿದೆ. ನಾನೂ ಗಯ್ಯಾಳಿ ಪಾತ್ರದಲ್ಲಿ ನಟಿಸಿಲ್ಲ. ಸೌಮ್ಯ ಸ್ವಭಾವದ ಹುಡುಗಿಯಾಗಿ ನಟಿಸಿದ್ದೇನೆ. ಯಾವುದೇ ನಟಿಗೂ ಕಮರ್ಷಿಯಲ್‌ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರೇ ಜನರು ಒಪ್ಪಿಕೊಳ್ಳುವುದು. ಈ ಚಿತ್ರದ ಪಾತ್ರವನ್ನು ಜನರು ಆ ದೃಷ್ಟಿಯಲ್ಲಿ ಒಪ್ಪಿಕೊಂಡು ಮೆಚ್ಚಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಆ ಕಾರಣಕ್ಕಾಗಿಯೇ ಸಿನಿಮಾ ಒಪ್ಪಿಕೊಂಡೆ’ ಎನ್ನುತ್ತಾರೆ. 

‘ರಾಮ ಚಕ್ಕನಿ ಸೀತಾ’ ಸಿನಿಮಾದ ತಾಲೀಮು, ಚಿತ್ರೀಕರಣ ಇವುಗಳಲ್ಲಿ ಪೂರ್ತಿ ಬ್ಯುಸಿಯಾಗಿದ್ದೆ. ಹಾಗಾಗಿ ಕನ್ನಡದ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಈಗ ಚಿತ್ರೀಕರಣ ಬಹುತೇಕ ಮುಗಿದಿರುವುದರಿಂದ ಬಿಡುವಾಗಿದ್ದೇನೆ. ಒಳ್ಳೆಯ ಅವಕಾಶಗಳು ಕನ್ನಡದಲ್ಲಿಯೂ ಬರುತ್ತಿವೆ. ಒಂದೆರಡು ಕಥೆಗಳನ್ನು ಕೇಳಿ ಇಷ್ಟಪಟ್ಟಿದ್ದೇನೆ. ನೋಡೋಣ ಕನ್ನಡದಲ್ಲಿಯೂ ಸಾಕಷ್ಟು ಅವಕಾಶಗಳು ಬರುತ್ತವೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಸುಕೃತಾ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !