ಸಜನ್‌ ಜತೆ ಸಪ್ತಪದಿ ತುಳಿದ ಸುಮನ್‌ ರಂಗನಾಥ್‌

ಸೋಮವಾರ, ಜೂನ್ 17, 2019
23 °C

ಸಜನ್‌ ಜತೆ ಸಪ್ತಪದಿ ತುಳಿದ ಸುಮನ್‌ ರಂಗನಾಥ್‌

Published:
Updated:
Prajavani

ಬೆಂಗಳೂರು: ಬಹುಭಾಷಾ ನಟಿ ಸುಮನ್‌ ರಂಗನಾಥ್‌ ಅವರು ಉದ್ಯಮಿ ಸಜನ್‌ ಚಿನ್ನಪ್ಪ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

90ರ ದಶಕದಲ್ಲಿ ನಟ ಶಂಕರನಾಗ್ ನಟನೆಯ ‘ಸಿ.ಬಿ.ಐ. ಶಂಕರ್’ ಚಿತ್ರದ ಮೂಲಕ ಸುಮನ್‌ ರಂಗನಾಥ್‌ ಚಿತ್ರರಂಗ ಪ್ರವೇಶಿಸಿದ್ದರು. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತಿಯ ಈ ನಟಿ ಇತ್ತೀಚೆಗೆ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

ಕೊಡಗು ಮೂಲದ ಸಜನ್‌ ಕಾಫಿ ಫ್ಲಾಂಟರ್‌ ಆಗಿದ್ದಾರೆ. 44 ವರ್ಷ ವಯಸ್ಸಿನ ಸುಮನ್‌ ರಂಗನಾಥ್‌ ಸೋಮವಾರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಾರೆ.

ಈ ಮೊದಲು ಸುಮನ್‌ ಅವರು ನಿರ್ಮಾಪಕ ಬಂಟಿ ವಾಲಿಯಾ ಅವರನ್ನು ಮದುವೆಯಾಗಿದ್ದರು. 2007ರಲ್ಲಿ ಪರಸ್ಪರ ದೂರವಾಗಿದ್ದರು. ಕಳೆದ ಎಂಟು ತಿಂಗಳ ಹಿಂದೆ ಅವರಿಗೆ ಸಜನ್‌ ಅವರ ಪರಿಚಯವಾಗಿತ್ತು. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಎರಡೂ ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಿರುವುದಾಗಿ ಸುಮನ್‌ ತಿಳಿಸಿದ್ದಾರೆ.

‘ನಮ್ಮೂರ ಹಮ್ಮೀರ’, ‘ಕೆಂಪು ಸೂರ್ಯ’, ‘ಬಿಂದಾಸ್’, ಬುದ್ಧಿವಂತ’, ‘ಸಿದ್ಲಿಂಗು’, ‘ಸವಾರಿ’, ‘ನೀರ್ ದೋಸೆ’, ‘ಕವಲುದಾರಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಸುಮನ್‌ ರಂಗನಾಥ್‌ ನಟಿಸಿದ್ದಾರೆ. ಅವರು ಮುಖ್ಯಭೂಮಿಕೆಯಲ್ಲಿರುವ ‘ದಂಡುಪಾಳ್ಯಂ 4’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !