ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂಪರ್ ಸ್ಟಾರ್’ ಜೊತೆ ಸುಂದರಂ ಮಾಸ್ಟರ್

Last Updated 25 ಏಪ್ರಿಲ್ 2021, 6:52 IST
ಅಕ್ಷರ ಗಾತ್ರ

ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿರುವ ‘ಸೂಪರ್ ಸ್ಟಾರ್’ ಚಿತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಸುಂದರಂ ಮಾಸ್ಟರ್ (ಖ್ಯಾತ ನಟ ಪ್ರಭುದೇವ ಅವರ ತಂದೆ) ಅಭಿನಯಿಸಿದ್ದಾರೆ.

86ರ ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಸುಂದರಂ ಮಾಸ್ಟರ್, ಈ ಚಿತ್ರದಲ್ಲೂ ನೃತ್ಯ ನಿರ್ದೇಶಕನ‌ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಇವರ ಅಭಿನಯದ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಿತು.

ಈ ವಯಸ್ಸಿನಲ್ಲೂ ಇತರೆ ಯುವಕಲಾವಿದರಿಗೂ ಕಮ್ಮಿ ಇಲ್ಲದಂತೆ ನಟಿಸಿರುವ ಸುಂದರಂ ಮಾಸ್ಟರ್ ಚಿತ್ರೀಕರಣದ ವೇಳೆ ಪಾಲ್ಗೊಂಡ ಕೆಲವು ಸನ್ನಿವೇಶಗಳನ್ನು ಚಿತ್ರತಂಡ ಮೇಕಿಂಗ್ ಟೀಸರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ.
ರಮೇಶ್ ವೆಂಕಟೇಶ್ ಬಾಬು ನಿರ್ದೇಶನದ ಈ ಚಿತ್ರದ ಎರಡು ಹಂತಗಳ ಚಿತ್ರೀಕರಣ ‌ಮುಕ್ತಾಯವಾಗಿದೆ.‌ ಮೂರನೇ ಹಂತದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ.‌

ಜಾರ ಎಸ್ಮಿನ್ ಈ ಚಿತ್ರದ ನಾಯಕಿ. ಅಚ್ಯುತ ಕುಮಾರ್, ರಂಗಾಯಣ ರಘು, ದೇವಿಯಾನಿ, ಸುಧಾ ಬೆಳವಾಡಿ, ಅವಿನಾಶ್, ಸೂರಜ್ (ಕಾಮಿಡಿ ಕಿಲಾಡಿಗಳು)ಹೀಗೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಆರ್‌ವಿಬಿ ಸಿನಿಮಾಸ್ ಲಾಂಛನದಲ್ಲಿ ಮೈಲಾರಿ ಎಂ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಾಘವೇಂದ್ರ ವಿ ಸಂಗೀತ ನೀಡುತ್ತಿದ್ದಾರೆ. ಚೇತನ್ ಕುಮಾರ್ ಸಾಹಿತ್ಯವಿದೆ. ಯೋಗಿ ಛಾಯಾಗ್ರಹಣ, ವಿಜಯ್ ಕುಮಾರ್ ಸಂಕಲನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT