ಬುಧವಾರ, ಮೇ 27, 2020
27 °C
ಕೊರೊನಾ ಲಾಕ್‌ಡೌನ್‌ನಿಂದ ಮನೆಯಲ್ಲಿ ಕುಳಿತು ಬೋರಾಗಿರುವ ಅಭಿಮಾನಿಗಳಿಗಾಗಿ ಟೂ ಪೀಸ್‌ ಚಿತ್ರಗಳು

ಅಭಿಮಾನಿಗಳ ಮನ ತಣಿಸಲು ಸಖತ್‌ ಹಾಟ್ ಚಿತ್ರಗಳ ಅಪ್‌ಲೋಡ್ ಮಾಡಿದ ಸನ್ನಿ ಲಿಯೋನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Sunny Leone

ಕೊರೊನಾ ಲಾಕ್‌ಡೌನ್‌ನಿಂದ ಮನೆಯಲ್ಲಿ ಕುಳಿತು ಬೋರಾಗಿರುವ ಅಭಿಮಾನಿಗಳ ಮನ ತಣಿಸಲು ಮಾದಕ ನಟಿ ಸನ್ನಿ ಲಿಯೋನ್‌ ಟೂ ಪೀಸ್‌ನಲ್ಲಿ (ಕನಿಷ್ಠ ಉಡುಗೆ) ತೆಗೆಸಿಕೊಂಡಿರುವ ಸರಣಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಏಪ್ರಿಲ್‌ 1ರಂದು ಅಭಿಮಾನಿಗಳನ್ನು ‘ಫೂಲ್‌’ ಮಾಡಲು ಹೋಗದೆ, ಕಿಸ್ಸಿಂಗ್‌ ವಿಡಿಯೊ ಹರಿಬಿಟ್ಟಿದ್ದರು. ಇದಾದ ಎರಡು ದಿನಗಳ ನಂತರ ಮತ್ತೆ ಅಭಿಮಾನಿಗಳ ಜತೆಗೆ ಲೈವ್‌ ಚಾಟ್‌ ನಡೆಸಿ, ತುಂಟ ಪ್ರಶ್ನೆಗಳಿಗೂ ಅವರು ಉತ್ತರಿಸಿದ್ದರು.

ಪತಿ ಡೇನಿಯಲ್‌ ವೆಬರ್‌ ಮತ್ತು ಮಕ್ಕಳೊಂದಿಗೆ ಅವರು ಲಾಕ್‌ಡೌನ್‌ ಸಮಯವನ್ನು ಉಲ್ಲಾಸದಿಂದ ಕಳೆಯುತ್ತಿದ್ದಾರಂತೆ. ಮೂವರು ಮಕ್ಕಳನ್ನು ಪ್ರಾಮ್‌ನಲ್ಲಿ ಕೂರಿಸಿಕೊಂಡು, ದಂಪತಿ ಡಾನ್ಸ್‌ ಮಾಡುತ್ತಾ ಮಕ್ಕಳನ್ನು ಆಟ ಆಡಿಸುತ್ತಾ ಖುಷಿಪಡಿಸುತ್ತಿರುವ ವಿಡಿಯೊವನ್ನೂ ಅವರು ಹಂಚಿಕೊಂಡಿದ್ದಾರೆ.

ಕ್ವಾರಂಟೈನ್‌ ಸಮಯವನ್ನು ಅಡುಗೆ ಮಾಡಲು, ತಮ್ಮ ಇಷ್ಟದ ಹವ್ಯಾಸವಾದ ಪೇಂಟಿಂಗ್‌ಗೆ ಬಳಸಿಕೊಳ್ಳುತ್ತಿದ್ದಾರೆ. ಮಕ್ಕಳ ಲಾಲನೆ– ಪಾಲನೆಗೆ ಕೆಲಸದವರನ್ನು ಅವಲಂಬಿಸದೆ ಪತಿ ಜತೆಗೆ ಅವರೇ ನಿಭಾಯಿಸುತ್ತಿದ್ದಾರಂತೆ. ಫಿಟ್ನೆಸ್‌ ಕಾಯ್ದುಕೊಳ್ಳಲು ಜೊತೆಗಾತಿ ಉಸ್ಮಾ ಅವರೊಂದಿಗೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿಯೇ ದಿನವೂ ಕಸರತ್ತು ಮಾಡುತ್ತಿದ್ದಾರೆ.

ಮಾದಕ ಸೌಂದರ್ಯದಿಂದಲೇ ಮೋಡಿ ಮಾಡಿರುವ ಈ ಚೆಲುವೆ ನೀಲಿಚಿತ್ರಗಳಿಗೆ ವಿದಾಯ ಹೇಳಿ ಬಾಲಿವುಡ್‌ನಲ್ಲಿ ನೆಲೆಯೂರಿದ್ದಾರೆ. ಚಿತ್ರ ನಿರ್ಮಾಣ ಹಾಗೂ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು, ಮರಾಠಿ, ಬೆಂಗಾಲಿ ಚಿತ್ರಗಳಲ್ಲಿ ನಟಿಸಿರುವ ಅವರು ಈಗ ಮಾಲಿವುಡ್‌ಗೂ ಕಾಲಿಟ್ಟಿದ್ದಾರೆ.

ಸದ್ಯ ತಮಿಳಿನ ‘ವೀರಮದೇವಿ’, ಮಲಯಾಳದ ‘ರಂಗೀಲಾ’, ಹಿಂದಿ ಮತ್ತು ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ‘ಕೊಕೊಕೋಲಾ’ ಮತ್ತು ‘ಹೆಲೆನ್‌’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು