ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಧುರರಾಜ’ ಚಿತ್ರೀಕರಣದಲ್ಲಿ ಸನ್ನಿ ಲಿಯೋನ್

‘ವೀರಮಾದೇವಿ’ ಬಿಡುಗಡೆ ಎಂದು?
Last Updated 29 ಜನವರಿ 2019, 19:45 IST
ಅಕ್ಷರ ಗಾತ್ರ

ಸೆಕ್ಸ್‌ ಸಂಬಂಧಿ ಚಿತ್ರ ಮತ್ತು ವಿಡಿಯೊಗಳಿಂದಾಗಿ ‘ಪ್ರೋನ್‌ ಸ್ಟಾರ್‌’ ಎಂದೇ ಖ್ಯಾತರಾಗಿರುವ ಸನ್ನಿ ಲಿಯೋನ್‌ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಮಾಲಿವುಡ್‌ನ ದಿಗ್ಗಜ ನಟ ಮಮ್ಮೂಟ್ಟಿ ನಾಯಕ ನಟರಾಗಿರುವ ‘ಮಧುರ ರಾಜ’ದಲ್ಲಿ ಸನ್ನಿ ಪ್ರಮುಖ ಪಾತ್ರ ಮಾಡಲಿದ್ದಾರೆ.

ಸನ್ನಿ ಈಗಾಗಲೇ ಕೊಚ್ಚಿಯಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅವರನ್ನು ನಿರ್ಮಾಪಕ ನೆಲ್ಸನ್‌, ವಿಮಾನ ನಿಲ್ದಾಣದಿಂದ ಚಿತ್ರೀಕರಣದ ಸ್ಥಳಕ್ಕೆ ಕರೆದೊಯ್ದರು. ಚಿತ್ರತಂಡ ಬರಮಾಡಿಕೊಂಡ ರೀತಿ ಮತ್ತು ತಮ್ಮನ್ನು ಆತ್ಮೀಯವಾಗಿ ಕಂಡ ರೀತಿಗೆ ಸನ್ನಿ ಕರಗಿಹೋಗಿದ್ದಾರಂತೆ. ಹಾಗಂತ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಮಧುರರಾಜ’ ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ. 2010ರಲ್ಲಿ ತೆರೆಕಂಡಿದ್ದ, ಮಮ್ಮೂಟ್ಟಿ ನಟನೆಯ ಸೂಪರ್ ಹಿಟ್ ಚಿತ್ರ ‘ಪೋಕಿರಿರಾಜ’ದ ಮುಂದುವರಿದ ಭಾಗ ಇದಾಗಿದೆ.

‘ವೀರಮಾದೇವಿ’ ಬಿಡುಗಡೆ ಎಂದು?

ದಕ್ಷಿಣ ಭಾರತದ ಚಿತ್ರರಂಗಗಳತ್ತ ಸನ್ನಿ ಲಿಯೋನ್‌ ಚಿತ್ತ ಹರಿಸಿ ಒಂದು ವರ್ಷ ಕಳೆದಿದೆ. ತಮಿಳಿನ ‘ವೀರಮಾದೇವಿ’ ಮೂಲಕ ಅವರು ಕಾಲಿವುಡ್‌ ಕಾಲಿಟ್ಟಾಗಿದೆ. ಅದು ಕನ್ನಡ, ಮಲಯಾಳಂ, ತೆಲುಗು ಮತ್ತು ಹಿಂದಿಯಲ್ಲಿ ತೆರೆಕಾಣಲಿದೆ.

ಆದರೆ, ಸೆಕ್ಸ್‌ ಸಿನಿಮಾ ಮತ್ತು ವಿಡಿಯೊಗಳಲ್ಲಿ ನಟಿಸಿರುವ ಸನ್ನಿ,ಪೌರಾಣಿಕ ಮಹತ್ವವುಳ್ಳ ವೀರಮಾದೇವಿಯ ಪಾತ್ರವನ್ನು ಮಾಡುತ್ತಿರುವುದಕ್ಕೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಬೆಂಗಳೂರಿನಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿದ್ದವು.ಕಳೆದ ಏಪ್ರಿಲ್‌ನಲ್ಲಿ ಫಸ್ಟ್‌ ಲುಕ್‌ ಕೂಡಾ ಬಿಡುಗಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT