ಸೋಮವಾರ, ಮೇ 10, 2021
19 °C

ಮಗಳೊಂದಿಗೆ ಮಹೇಶ್ ಬಾಬು ಟಂಗ್‌ ಟ್ವಿಸ್ಟರ್ ಆಟ: ವಿಡಿಯೊ ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ ಸೂಪರ್‌ ಸ್ಟಾರ್ ಮಹೇಶ್‌ ಬಾಬು ತಮ್ಮ ಪುತ್ರಿಯೊಂದಿಗೆ ಟಂಗ್‌ ಟ್ವಿಸ್ಟರ್ ಆಟ ಆಡುತ್ತಿರುವ ವಿಡಿಯೊ ವೈರಲ್ ಆಗಿದೆ. ತಾವು ಮಗಳೊಂದಿಗೆ ಟಂಗ್‌ ಟ್ವಿಸ್ಟರ್ ಮಾಡುತ್ತಿರುವ ವಿಡಿಯೊವನ್ನು ಸ್ವತಃ ಮಹೇಶ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇವರು ಮಕ್ಕಳೊಂದಿಗೆ ವಿವಿಧ ಬಗೆ ಬಗೆಯ ಆಟಗಳನ್ನು ಆಡುತ್ತಿದ್ದು ಪತ್ನಿ ನರ್ಮತಾ ಶಿರೋಡ್ಕರ್ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಪ–ಮಕ್ಕಳ ಬಾಂಧವ್ಯವನ್ನು ಹಂಚಿಕೊಳ್ಳುತ್ತಿರುತ್ತಾರೆ.

ಕೊರೊನಾ ಬಿಕ್ಕಟ್ಟಿನ ಕಾರಣದಿಂದ ಲಾಕ್‌ಡೌನ್ ವಿಧಿಸಿದ್ದು ಸೂಪರ್‌ ಸ್ಟಾರ್‌ಗೆ ವರವೇ ಎಂದು ಹೇಳಬಹುದು. ಒಂದರ ಹಿಂದೆ ಒಂದು ಸಿನಿಮಾ ಮಾಡುತ್ತಿದ್ದ ಮಹೇಶ್‌ ಸದಾ ಶೂಟಿಂಗ್‌ನಲ್ಲಿ ಬ್ಯುಸಿ ಇರುತ್ತಿದ್ದರು. ಅವರು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದದ್ದೇ ತುಂಬಾ ಅಪರೂಪ. ಪ್ರತಿ ವರ್ಷ ಶೂಟಿಂಗ್‌ ಮುಗಿಸಿದ ಮೇಲೆ ಕುಟುಂಬದೊಂದಿಗೆ ವಿದೇಶಕ್ಕೆ ಪ್ರವಾಸ ಮಾಡುತ್ತಿದ್ದರು ಮಹೇಶ್ ಬಾಬು.

ಆದರೆ ಈ ಬಾರಿ ಲಾಕ್‌ಡೌನ್ ಕಾರಣದಿಂದ ವಿದೇಶ ಪ್ರವಾಸಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಆದರೆ ಸತತ ಶೂಟಿಂಗ್‌ನಿಂದ ಬಿಡುವಿಗಾಗಿ ಕಾಯುತ್ತಿದ್ದ ಮಹೇಶ್‌ಗೆ ಇದು ವರವಾಗಿದೆ. ಈ ಬಿಡುವನ್ನು ಮಗಳು ಸಿತಾರಾ ಜೊತೆ ಸೇರಿ ಎಂಜಾಯ್‌ ಮಾಡುತ್ತಿದ್ದಾರೆ. ಅಪ್ಪ–ಮಗಳ ಈ ಬಂಧಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮಗಳಿಗೆ ಹೆಚ್ಚು ಸಮೀಪವಾಗಿರುವ ಮಹೇಶ್‌ ದಿನದಲ್ಲಿ ಹೆಚ್ಚಿನ ಸಮಯವನ್ನು ಆಕೆಯೊಂದಿಗೆ ಕಳೆಯುತ್ತಿದ್ದಾರೆ. ಸಾಧ್ಯವಾದಾಗಲೆಲ್ಲಾ ಮಗಳ ಜೊತೆಯೇ ಇರಲು ಪ್ರಯತ್ನಿಸುತ್ತಿದ್ದಾರೆ.

ಈಗ ಮಹೇಶ್ ಹಾಗೂ ನಮೃತಾ ವಿಡಿಯೊ, ಪೋಸ್ಟ್‌ಗಳನ್ನು ನೋಡಿದ ಅಭಿಮಾನಿಗಳು ಹಾಗೂ ಫಾಲೋವರ್ಸ್ಸ್‌ಗಳು ಎಲ್ಲಾ ತಂದೆ–ತಾಯಿಗಳು ತಮ್ಮ ಮಕ್ಕಳೊಂದಿಗೆ ಇದೇ ರೀತಿ ಇರಬೇಕು, ಹೀಗೆ ಪ್ರೀತಿ ನೀಡಬೇಕು ಎಂದು ಆಶಿಸಿದ್ದಾರೆ.

‘ಗೀತಾ ಗೋವಿಂದ’ ಖ್ಯಾತಿ ಪರಶುರಾಮ್‌ ನಿರ್ದೇಶನದ ’ಸರ್ಕಾರು ವಾರಿ ಪಾಟ’ ಸಿನಿಮಾದಲ್ಲಿ ಮಹೇಶ್ ನಟಿಸಲಿದ್ದಾರೆ. ಈ ಚಿತ್ರದ ಶೂಟಿಂಗ್ ಆಗಸ್ಟ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು