ಚೆನ್ನೈ: ತಮಿಳಿನ ‘ಕರುಪ್ಪು’ ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಟ ಸೂರ್ಯ ಅವರು ತಮ್ಮ ತಂಡದಲ್ಲಿ ಕೆಲಸ ಮಾಡಿದ್ದವರಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಛಾಯಾಚಿತ್ರಗ್ರಾಹಕ ಜಿ.ಕೆ. ವಿಷ್ಣು, ಸಿನಿಮಾ ಸಂಕಲನಕಾರ ಮತ್ತು ಸಂಗೀತ ನಿರ್ದೇಶಕರಿಗೆ ‘ಮಹೀಂದ್ರಾ ಬಿಇ6 ಬ್ಯಾಟ್ಮಾನ್ ಎಡಿಷನ್’ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಈ ಕಾರಿನ ಬೆಲೆ ₹28.49 ಲಕ್ಷ ಇದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜಿ.ಕೆ. ವಿಷ್ಣು ಅವರು ಸೂರ್ಯ ಅವರಿಗೆ ‘ಧನ್ಯವಾದ, ನಿಮ್ಮದು ವಿಶಾಲ ಹೃದಯ’ ಎಂದು ಹೇಳಿದ್ದಾರೆ.

ಸಂಕಲನಕಾರ ಕಲೈವನನ್ ಆರ್. ಅವರೂ ಐಷಾರಾಮಿ ಕಾರು ಉಡುಗೊರೆ ನೀಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಕಾರಿನ ಮುಂದೆ ಕುಟುಂಬದೊಂದಿಗೆ ನಿಂತು ಫೋಟೊ ತೆಗೆಸಿಕೊಂಡು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಸಿನಿಮಾದ ನಿರ್ದೇಶಕ ಆರ್.ಜೆ.ಬಾಲಾಜಿ ಕೂಡ ಪೋಸ್ಟ್ ಹಂಚಿಕೊಂಡು ‘ಹೀರೋ, ನಿರ್ದೇಶಕನಿಗೆ ಉಡುಗೊರೆ ನೀಡಿರುವುದು ಇದೇ ಮೊದಲು’ ಎಂದು ಬರೆದುಕೊಂಡಿದ್ದಾರೆ.

ಸಂಗೀತ ಸಂಯೋಜಕ ಸಾಯಿ ಅಭಯಂಕರ್ ಕೂಡ ಸೂರ್ಯ ಅವರಿಗೆ ಧನ್ಯವಾದ ಹೇಳಿದ್ದಾರೆ.

ಮೇ 14 ರಂದು ತೆರೆಕಾಣಬೇಕಿದ್ದ ಸೂರ್ಯ ಹಾಗೂ ತ್ರಿಷಾ ನಟನೆಯ ‘ಕರುಪ್ಪು’ ಚಿತ್ರ ಕೊನೆಕ್ಷಣದಲ್ಲಿ ಮೊದಲ ಪ್ರದರ್ಶನ ಕಂಡಿರಲಿಲ್ಲ. ನಂತರ ಮೇ 15ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಹಲವು ಏಳು ಬೀಳುಗಳ ನಡುವೆ ಸಿನಿಮಾ ಯಶಸ್ವಿಯಾಗಿದೆ.

‘ಕರುಪ್ಪು’ ಜಗತ್ತಿನಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು ಈವರೆಗೆ ₹300 ಕೋಟಿ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.