ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಪಾರ್ಟಿಯೊಂದಕ್ಕೆ ಆಹ್ವಾನ ಇಲ್ಲದಿದ್ದರೂ ಹಾಜರಾದ ಅತಿಥಿ ಅನಿಲ್‌ ಕಪೂರ್!

Last Updated 27 ಮಾರ್ಚ್ 2019, 10:41 IST
ಅಕ್ಷರ ಗಾತ್ರ

ಮುಂಬೈನ ಸೋಹೊ ಹೌಸ್‌ ರೆಸ್ಟೋರೆಂಟ್‌ನಲ್ಲಿ ಸೋಮವಾರ ಮಧ್ಯಾಹ್ನನಡೆದ ಮಹಿಳೆಯರ ಪಾರ್ಟಿಯೊಂದಕ್ಕೆ ಆಹ್ವಾನ ಇಲ್ಲದಿದ್ದರೂ ನುಗ್ಗಿದ ಚಿರಯುವಕ ನಟ ಅನಿಲ್‌ ಕಪೂರ್‌ ಮತ್ತು ಸಹೋದರ ಸಂಜಯ್‌ ಕಪೂರ್‌ ಎಲ್ಲರನ್ನೂ ಚಕಿತಗೊಳಿಸಿದರು.

ಅನಿರೀಕ್ಷಿತವಾಗಿ ಪ್ರತ್ಯಕ್ಷರಾದ ಅತಿಥಿಗಳನ್ನು ಕಂಡು ಅಲ್ಲಿದ್ದ ಮಹಿಳಾ ಮಣಿಗಳಿಗೆ ಎಲ್ಲಿಲ್ಲದ ಖುಷಿ. ಸೋಹೊ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಏರ್ಪಡಿಸಿದ್ದು ಬೇರೆ ಯಾರೂ ಅಲ್ಲ, ಅನಿಲ್‌ ಪತ್ನಿ ಸುನಿತಾ ಕಪೂರ್‌!

ಭಾನುವಾರ ಬರ್ತ್ ಡೇ ಆಚರಿಸಿಕೊಂಡ ಸುನಿತಾ ತನ್ನ ಸ್ನೇಹಿತೆಯರು ಮತ್ತು ಕುಟುಂಬದ ಮಹಿಳಾ ಸದಸ್ಯರನ್ನು ಹೋಟೆಲ್‌ಗೆ ಊಟಕ್ಕೆ ಕರೆದೊಯ್ದಿದ್ದರು. ಅದು ಅಪ್ಪಟ ಮಹಿಳೆಯರ ಪಾರ್ಟಿ ಆಗಿದ್ದರಿಂದ ಪುರುಷರಿಗೆ ಪ್ರವೇಶ ಇರಲಿಲ್ಲ. ಆದರೆ, ಅನಿಲ್‌ ಮತ್ತು ಸಂಜಯ್‌ ಸಹೋದರರು ಆಹ್ವಾನ ಇಲ್ಲದಿದ್ದರೂ ಅಲ್ಲಿಗೆ ನುಗ್ಗಿದರು.

ಅನಿಲ್‌–ಸುನಿತಾ ಪುತ್ರಿಯರಾದ ಸೋನಂ ಮತ್ತು ರಿಹಾ ಕಪೂರ್‌, ಸಂಜಯ್‌ ಕಪೂರ್‌ ಪತ್ನಿ ಮಹಿಪ್‌ ಕಪೂರ್‌, ಚಂಕಿ ಪಾಂಡೆ ಪತ್ನಿ ಭಾವನಾ ಪಾಂಡೆ, ಸೊಹೇಲ್‌ ಖಾನ್‌ ಪತ್ನಿ ಸೀಮಾ ಖಾನ್‌, ರಿಷಿ ಕಪೂರ್‌ ಸಹೋದರಿ ರಿಮಾ ಜೈನ್‌ ಸೆರಿದಂತೆ ಅನೇಕರ ಜತೆ ಅನಿಲ್‌ ಮತ್ತು ಸಂಜಯ್‌ ಚಿತ್ರ ತೆಗೆಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT