ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 24ರಂದು ಹಾಟ್‌ಸ್ಟಾರ್‌ನಲ್ಲಿ ಸುಶಾಂತ್‌ ಕೊನೆ ಸಿನಿಮಾ ‘ದಿಲ್‌ ಬೇಚಾರಾ‌’‌

Last Updated 26 ಜೂನ್ 2020, 1:36 IST
ಅಕ್ಷರ ಗಾತ್ರ

ದಿಲ್‌ ಬೇಚಾರಾ...

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್‌ ನಟಸುಶಾಂತ್‌ ಸಿಂಗ್‌ ರಜಪೂತ್ ಅಭಿನಯದ ಕೊನೆ ಸಿನಿಮಾ.

ಈ ಸಿನಿಮಾವನ್ನು ಥಿಯೇಟರ್‌ಗಳಲ್ಲೇ ಬಿಡುಗಡೆ ಮಾಡುವ ಮೂಲಕ ಸುಶಾಂತ್‌ಗೆ ಗೌರವ ಸಲ್ಲಿಸುವಂತೆಪಟ್ಟು ಹಿಡಿದಿದ್ದ ಅಭಿಮಾನಿಗಳು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನೂ ಮಾಡಿದ್ದರು.

ಆದರೆ, ಇದೀಗ ಬಂದಿರುವ ತಾಜಾಸುದ್ದಿ ಏನೆಂದರೆ,‘ದಿಲ್‌ ಬೇಚಾರಾ’ ಸಿನಿಮಾವನ್ನು ಜುಲೈ 24ರಂದು ‌ಡಿಸ್ನಿ ಹಾಟ್‌ಸ್ಟಾರ್ಡಿಜಿಟಲ್‌ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತಿದೆ. ಅಷ್ಟೇ ಅಲ್ಲ, ಹಾಟ್‌ಸ್ಟಾರ್‌ ಚಂದಾದಾರರಲ್ಲದವರೂಈ ಸಿನಿಮಾ ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಆ ಮೂಲಕ ಖ್ಯಾತ ನಟನೊಬ್ಬನಿಗೆ ಗೌರವ ಸಲ್ಲಿಸುತ್ತಿರುವುದಾಗಿ ದ ವಾಲ್ಟ್‌ ಡಿಸ್ನಿ ಕಂಪೆನಿ ಎಪಿಎಸಿ ಮತ್ತು ಸ್ಟಾರ್ ಮತ್ತು ಡಿಸ್ನಿ ಇಂಡಿಯಾ ಕಂಪೆನಿ ಅಧ್ಯಕ್ಷ ಉದಯಶಂಕರ್ ತಿಳಿಸಿದ್ದಾರೆ.

ಮುಖೇಶ್ ಛಾಬ್ರಾನಿರ್ದೇಶನದ ಮೊದಲ ಚಿತ್ರ ‘ದಿಲ್‌ ಬೇಚಾರಾ’ . ಈ ಸಿನಿಮಾವನ್ನು ‘ಫಾಕ್ಸ್‌ ಸ್ಟಾರ್ ಸ್ಟುಡಿಯೊ‌‘ ನಿರ್ಮಾಣ ಮಾಡಿದೆ.

ಹಿಂದಿನಿಂದಲೂ ಸುಶಾಂತ್ ಸಿಂಗ್‌, ಸ್ಟಾರ್‌ ಮತ್ತು ಡಿಸ್ನಿ ಇಂಡಿಯಾ ನೆಟ್‌ವರ್ಕ್‌ ಸಂಸ್ಥೆಯೊಂದಿಗೆ ಉತ್ತಮ ಸಂಬಂಧವಿಟ್ಟು ಕೊಂಡಿದ್ದರು. ಇದೇ ಸಂಸ್ಥೆ 2008ರಲ್ಲಿ ಆಯೋಜಿಸಿದ್ದ ‘ಕಿಸ್‌ ದೇಶ್ ಮೇ ಹೈ ಮೇರಾ ದಿಲ್‌‘ ರಿಯಾಲಿಟಿ ಷೊ ನಂತರ ಸುಶಾಂತ್‌ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಆ ನಂತರ 2016ರಲ್ಲಿಇದೇ ಫಾಕ್ಸ್‌ ಸ್ಟಾರ್‌ ಸ್ಟುಡಿಯೊ ‘ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’ ಮತ್ತು 2019ರಲ್ಲಿ ‘ಛಿಛೋರೆ‘ ಸಿನಿಮಾಗಳನ್ನು ನಿರ್ಮಾಣ ಮಾಡಿತ್ತು.

‘ಸುಶಾಂತ್‌, ನನ್ನ ಮೊದಲ ಚಿತ್ರದ ಹೀರೊ ಮಾತ್ರವಲ್ಲ, ಅತ ನನ್ನ ಆಪ್ತ ಗೆಳೆಯನಾಗಿದ್ದ. ಆತನ ಮೊದಲ ಸಿನಿಮಾ ‘ಕಾಯ್ ಪೊ ಚೆ’ ಯಿಂದ ಕೊನೆಯ ಸಿನಿಮಾ ‘ದಿಲ್‌ ಬೇಚಾರಾ‌’ವರೆಗೂ ನಮ್ಮದು ಬಿಟ್ಟಿರಲಾರದ ಗೆಳೆತನ’ ಎಂದು ಚಿತ್ರದ ನಿರ್ದೇಶಕ ಮುಖೇಶ್ ಛಾಬ್ರಾ ನೆನಪಿಸಿಕೊಂಡಿದ್ದಾರೆ.

‘ನಿನ್ನ ಮೊದಲ ನಿರ್ದೇಶನದ ಸಿನಿಮಾದಲ್ಲಿ ನಾನು ಇರುತ್ತೇನೆ’ ಎಂದುಸುಶಾಂತ್ ನನಗೆ ಮಾತುಕೊಟ್ಟಿದ್ದ. ಆದರೆ, ಈಗ ಆತನಿಲ್ಲದೇ ಸಿನಿಮಾ ಬಿಡುಗಡೆ ಮಾಡುವುದನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ‘ ಎಂದು ಬೇಸರ ಹೊರಹಾಕಿದ್ದಾರೆ.

'ಸುಶಾಂತ್‌ ಸಿಂಗ್ ಜೀವನ ಮತ್ತು ಸಿನಿಮಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗೌರವಿಸಲು ಅವರ ಕೊನೆಯ ಸಿನಿಮಾ ‘ದಿಲ್‌ ಬೇಚಾರ‌‘ವನ್ನು ಇದೇ ಜುಲೈನಲ್ಲಿ ನೇರವಾಗಿ ಡಿಸ್ನಿ ಹಾಟ್‌ಸ್ಟಾರ್ ಡಿಜಿಟಲ್‌ ವೇದಿಕೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಸಿನಿಮಾವನ್ನು ದೇಶದಾದ್ಯಂತವಿರುವ ಹಾಟ್‌ಸ್ಟಾರ್ ಚಂದಾದಾರರು ಮತ್ತು ಚಂದಾದಾರರಲ್ಲದವರೂ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ' ಎಂದುಸ್ಟಾರ್– ಡಿಸ್ನಿ ಇಂಡಿಯಾ ಕಂಪನಿ ಅಧ್ಯಕ್ಷ ಉದಯಶಂಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT