ಭಾನುವಾರ, ಜನವರಿ 19, 2020
23 °C

ಮರಳಿ ತೆರೆಗೆ ಸುಷ್ಮಿತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೈ ಹ್ಞೂಂ ನಾ’, ‘ಫಿಲ್‌ಹಾಲ್‌’ ಸಿನಿಮಾಗಳನ್ನು ವೀಕ್ಷಿಸಿ, ನಟಿ ಸುಷ್ಮಿತಾ ಸೆನ್ ಅವರ ಅಭಿಮಾನಿಗಳಾಗಿದ್ದವರಿಗೆ ಸಿಹಿ ಸುದ್ದಿ. ಸುಷ್ಮಿತಾ ಅವರು ವರ್ಷಗಳ ಅಂತರದ ನಂತರ ಮತ್ತೆ ಹಿರಿತೆರೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.

ಈ ವಿಚಾರವನ್ನು ಸುಷ್ಮಿತಾ ಅವರು ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ‘ಪ್ರೀತಿಗೆ ನಾನು ಯಾವತ್ತೂ ಗೌರವ ನೀಡಿದ್ದೇನೆ. ಇದರಿಂದಾಗಿಯೇ ನಾನು ನನ್ನ ಅಭಿಮಾನಿಗಳ ಅಭಿಮಾನಿ ಕೂಡ ಆಗಿದ್ದೇನೆ. ನಾನು ತೆರೆಯ ಮೇಲೆ ಪುನಃ ಕಾಣಿಸಿಕೊಳ್ಳುವುದನ್ನು ಅವರು ವರ್ಷಗಳಿಂದ ಕಾಯುತ್ತಿದ್ದಾರೆ. ನಾನು ನಟನೆಯಿಂದ ಬಿಡುವು ಪಡೆದಿದ್ದ ಅವಧಿಯಲ್ಲೆಲ್ಲ ಅವರು ಬೇಷರತ್ತಾಗಿ ನನಗೆ ಬೆಂಬಲ ನೀಡಿದ್ದಾರೆ’ ಎಂದು ಸುಷ್ಮಿತಾ ಬರೆದಿದ್ದಾರೆ.

‘ನಾನು ನಿಮಗಾಗಿಯೇ ವಾಪಸ್ ಬರುತ್ತಿದ್ದೇನೆ’ ಎಂದೂ ಅವರು ಹೇಳಿದ್ದಾರೆ. ಆದರೆ ತಮ್ಮ ಮುಂದಿನ ಸಿನಿಮಾ ಯಾವುದು ಎನ್ನುವುದನ್ನು ತಿಳಿಸಿಲ್ಲ. ಸುಷ್ಮಿತಾ ಅವರು ಕಡೆಯ ಬಾರಿ ತೆರೆಯ ಮೇಲೆ ಕಾಣಿಸಿಕೊಂಡಿದ್ದು 2015ರ ಬಂಗಾಳಿ ಚಿತ್ರ ‘ನಿರ್ಬಾಕ್‌’ನಲ್ಲಿ. ಅವರು ಅಭಿನಯಿಸಿದ ಕಡೆಯ ಹಿಂದಿ ಸಿನಿಮಾ ‘ನೋ ಪ್ರಾಬ್ಲಮ್’. ಇದು 2010ರಲ್ಲಿ ತೆರೆಗೆ ಬಂದಿತ್ತು.

‘ಬೀವಿ ನಂ.1’, ‘ಜೋರ್’, ‘ಫಿಲ್‌ಹಾಲ್‌’, ‘ಮೈ ಹ್ಞೂಂ ನಾ’ ಮತ್ತು ‘ಮೈನೆ ಪ್ಯಾರ್‌ ಕ್ಯೂಂ ಕಿಯಾ’ ಅವರು ಅಭಿನಯಿಸಿದ ಚಿತ್ರಗಳು.

ಪ್ರತಿಕ್ರಿಯಿಸಿ (+)