ಶುಕ್ರವಾರ, ಜನವರಿ 27, 2023
19 °C

ಸಸ್ಪೆನ್ಸ್‌ ಥ್ರಿಲ್ಲರ್‌ನ ‘ರೋನಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀಮಂತ ಹುಡುಗಿಯ ಮನೆಯಲ್ಲಿ ದರೋಡೆ ನಡೆದಾಗ ಏನಾಯಿತು? ಇದಕ್ಕೆ ಉತ್ತರಿಸಲಿದೆ ‘ರೋನಿ’. ಈ ಚಿತ್ರಕ್ಕೆ ಇತ್ತೀಚೆಗೆ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ಲಕ್ಷೀ ಗಣಪತಿ ಸ್ಟುಡಿಯೋಸ್ ಮತ್ತು ರೋಶಿಕಾ ಎಂಟರ್‌ಪ್ರೈಸಸ್ ಬ್ಯಾನರ್‌ ಅಡಿ ಎಂ.ರಮೇಶ್ ಹಾಗೂ ಪವನ್‌ಕುಮಾರ್ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕಿರಣ್‌ ಆರ್‌.ಕೆ. ಚಿತ್ರದ ನಿರ್ದೇಶಕರು. 

‘ನಾಯಕಿಯ ಮನೆಯಲ್ಲಿರುವ ನಾಯಿ ಪ್ರಕರಣದ ಸುಳಿವು ನೀಡಿತೇ? ಮುಖ್ಯ ಕಥೆಯ ಸಾಗುತ್ತಿದ್ದಂತೆಯೇ ಎರಡು ಕೊಲೆಗಳು ನಡೆದದ್ದು ಏಕೆ? ಪೊಲೀಸರು ತನಿಖೆ ಮಾಡಿದ್ದು ಹೇಗೆ ಎಂಬೆಲ್ಲಾ ಕುತೂಹಲಗಳಿಗೆ ಉತ್ತರ ಸಿಗಲಿದೆ’ ಎಂದಿದೆ ಚಿತ್ರತಂಡ.

ಚಿತ್ರಕ್ಕೆ ಧರ್ಮಕೀರ್ತಿರಾಜ್ ನಾಯಕ. ನವಪ್ರತಿಭೆ ಋತ್ವಿಪಟೇಲ್ ನಾಯಕಿ. ಉಳಿದಂತೆ ವರ್ಧನ್‌, ರಘುಪಾಂಡೇಶ್ವರ್, ಬಲರಾಜವಾಡಿ, ರತನ್‌ಕರತಮಾಡ ಮುಂತಾದವರು ನಟಿಸುತ್ತಿದ್ದಾರೆ. ಎರಡು ಹಾಡುಗಳಿಗೆ ರಾಜ್‌ಕಿಶೋರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ನಾಗರಾಜ ವೀನಸ್‌ಮೂರ್ತಿ, ಸಂಕಲನ ವೆಂಕಿ ಯುಡಿವಿ, ಸಾಹಸ ಕುಂಗುಪೂ ಚಂದ್ರು, ನೃತ್ಯ ಗೀತಾಸೈ, ಕಾರ್ಯಕಾರಿ ನಿರ್ಮಾಪಕ ಧರಂ ಸಲ್ವಾನಿ ಅವರದಾಗಿದೆ. ಬೆಂಗಳೂರು, ಮಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು