ಸುವರ್ಣದಂಥ ಸುಂದರಿ: ಕಥೆ ನೋಡಲು ರೆಡಿನಾ?!

ಶುಕ್ರವಾರ, ಮೇ 24, 2019
33 °C

ಸುವರ್ಣದಂಥ ಸುಂದರಿ: ಕಥೆ ನೋಡಲು ರೆಡಿನಾ?!

Published:
Updated:
Prajavani

‘ಸುವರ್ಣ ಸುಂದರಿ’ ಚಿತ್ರದ ಮುಹೂರ್ತ ನಡೆದಿದ್ದು ಎರಡು ವರ್ಷಗಳ ಹಿಂದೆ. ಈಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ. ಇದರಲ್ಲಿ ಒಟ್ಟು ನಾಲ್ಕು ತಲೆಮಾರುಗಳ ಕಥೆ ಇದೆ ಎಂದು ಸಿನಿತಂಡ ಹೇಳಿದೆ.

ಶ್ರೀಕೃಷ್ಣದೇವರಾಯನ ಅವಧಿಯ ರಾಜಾ ಮಹಾದೇವರೆಡ್ಡಿಯ ಸಾಮ್ರಾಜ್ಯದಲ್ಲಿ ನಡೆದ ಘಟನೆಗಳನ್ನು ಈ ಚಿತ್ರದ ಕಥೆಗೆ ಬಳಸಿಕೊಳ್ಳಲಾಗಿದೆಯಂತೆ. ಮೈನವಿರೇಳಿಸುವ ಸಾಹಸ ದೃಶ್ಯಗಳು ಕೂಡ ಇದರಲ್ಲಿ ಇವೆ.

ಕೇರಳ, ಹೈದರಾಬಾದ್, ಬೀದರ್, ಬೆಂಗಳೂರಿನ ವಿಧಾನಸೌಧ ರಸ್ತೆ ಮತ್ತು ನೈಸ್ ರಸ್ತೆಯಲ್ಲಿ ಒಟ್ಟು 90 ದಿನಗಳ ಚಿತ್ರೀಕರಣ ನಡೆಸಲಾಗಿದೆ. 50 ನಿಮಿಷಗಳ ಗ್ರಾಫಿಕ್ಸ್ ಕೂಡ ಇದೆ. ಡೆಹರಾಡೂನ್‌ನ ಸಾಕ್ಷಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

1960ರ ಅವಧಿಯ ಕಲೆಕ್ಟರ್ ಪಾತ್ರದಲ್ಲಿ ತಿಲಕ್ ನಟಿಸಿದ್ದಾರೆ. ಎರಡು ಹಾಡುಗಳಿಗೆ ಸಾಯಿ ಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ. ಎಂ.ಎಸ್.ಎನ್. ಸೂರ್ಯ ಕಥೆ ಬರೆದು ನಿರ್ದೇಶನ ಕೂಡ ಮಾಡುತ್ತಿದ್ದಾರೆ.

ಚಿತ್ರಕ್ಕಾಗಿ ₹ 10 ಕೋಟಿ ಖರ್ಚಾಗಿದೆ ಎಂದು ಸಿನಿಮಾ ತಂಡ ತಿಳಿಸಿದೆ. ಎಂ.ಎನ್. ಲಕ್ಷ್ಮಿ ಈ ಚಿತ್ರದ ನಿರ್ಮಾಪಕಿ. ಈ ಚಿತ್ರ ಇದೇ 31ರಂದು ತೆರೆಗೆ ಬರುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !