ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರುಗೆ ಬಚ್ಚನ್ ಗುರು

Last Updated 14 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಈಚೆಗಷ್ಟೇ 76ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ನಟನೆಯ 151 ಸಿನಿಮಾ ‘ಸೈರಾ ನರಸಿಂಹರೆಡ್ಡಿ’ಯಲ್ಲೂ ಅಭಿನಯಿಸುತ್ತಿದ್ದಾರೆ. ಆದರೆ, ಅವರ ಪಾತ್ರದ ಬಗ್ಗೆ ಚಿತ್ರತಂಡ ಇದುವರೆಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ.

ಸಿನಿಮಾದ ಪೋಸ್ಟರ್‌ ಅನ್ನು ಬಿಡುಗಡೆ ಮಾಡುವ ಮೂಲಕ ಸೈರಾ ನರಸಿಂಹರೆಡ್ಡಿ ಚಿತ್ರತಂಡವು ಅಮಿತಾಭ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆಉಡುಗೊರೆ ನೀಡಿತ್ತು. ಅದರ ಬೆನ್ನಲ್ಲೇ ಚಿತ್ರದಲ್ಲಿ ಅವರ ಪಾತ್ರದ ಬಗ್ಗೆಯೂ ಮಾಹಿತಿ ಬಹಿರಂಗವಾಗಿದೆ.

ಆ ಸಿನಿಮಾದಲ್ಲಿ ಚಿರಂಜೀವಿ, ‘ಸೈರಾ ನರಸಿಂಹರೆಡ್ಡಿ’ ಪಾತ್ರದಲ್ಲಿ ನಟಿಸುತ್ತಿದ್ದರೆ, ಅವರ ಗುರು ಗೋಸಾಯಿ ವೆಂಕಣ್ಣ ಪಾತ್ರದಲ್ಲಿ ಅಮಿತಾಭ್ ಅಭಿನಯಿಸುತ್ತಿದ್ದಾರಂತೆ. ಈ ಮಾಹಿತಿಯನ್ನು ಖಚಿತಪಡಿಸುವಂತಿದೆ ಚಿತ್ರತಂಡ ಬಿಡುಗಡೆ ಮಾಡಿದ ಆ ಪೋಸ್ಟರ್‌.

ಪೋಸ್ಟರ್‌ನಲ್ಲಿ,ಥೇಟ್ ಗುರುವಿನಂತೆ ಅಮಿತಾಭ್ ಕಾಣಿಸುತ್ತಿದ್ದಾರೆ. ಹಣೆ ಮೇಲೆ ಉದ್ದನೆಯ ತಿಲಕ ಹಾಗೂ ಉದ್ದನೆಯ ಗಡ್ಡಬಿಟ್ಟಿರುವ ಅಮಿತಾಭ್ ವೀರಾವೇಷದ ಹೋರಾಟಗಾರನಂತೆ ಖಡಕ್ ಆಗಿ ಕಂಡಿದ್ದಾರೆ.

ಪೋಸ್ಟರ್ ಮಾದರಿಯ ಆ ವಿಡಿಯೊ ಬಿಡುಗಡೆಯಾದ ಮೂರೇ ದಿನದಲ್ಲಿ ಸುಮಾರು 7 ಲಕ್ಷ ಮಂದಿ ವೀಕ್ಷಕರು ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅದು ವೈರಲ್ ಆಗಿದ್ದು, ಅಮಿತಾಭ್ ಅವರ ವಿಭಿನ್ನವಾದ ನೋಟಕ್ಕೆ ಮನಸೋತ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರವಾದ ‘ಥಗ್ಸ್ ಆಫ್ ಹಿಂದೂಸ್ಥಾನ್’ ಚಿತ್ರದಲ್ಲೂ ವೀರ ಹೋರಾಟಗಾರನ ಪಾತ್ರದಲ್ಲಿ ಬಚ್ಚನ್ ನಟಿಸುತ್ತಿದ್ದು, ಎದೆ ಝಲ್ ಎನಿಸುವ ಸಾಹಸವನ್ನು ಇಳಿ ವಯಸ್ಸಿನಲ್ಲಿ ಮಾಡಿರುವುದು ಆ ಸಿನಿಮಾದ ಟ್ರೇಲರ್‌ನಲ್ಲಿ ಬಹಿರಂಗಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT