ಹೊಟ್ಟೆ ಬೊಜ್ಜು ಕರಗಿಸುವ ಸಲುವಾಗಿ ತಮಗೆ ತಾವೇ ಚಿತ್ರಹಿಂಸೆಯನ್ನು ಕೊಟ್ಟುಕೊಳ್ಳಬೇಡಿ ಎಂದು ಬಾಲಿವುಡ್ ನಟಿ ತಾಪ್ಸಿ ಪನ್ನು ಅವರು ಮಹಿಳೆಯರಿಗೆ ಸಲಹೆ ನೀಡಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿರುವ ತಾಪ್ಸಿ,‘ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೊಟ್ಟೆ ಕೆಳಗಿನ ಬೊಜ್ಜು ಕರಗಿಸುವ ಭರದಲ್ಲಿ ತಮಗೆ ತಾವೇ ಚಿತ್ರಹಿಂಸೆಯನ್ನು ಕೊಟ್ಟುಕೊಳ್ಳುತ್ತಿದ್ದಾರೆ. ಬೊಜ್ಜು ಕರಗಿಸುವ ವೇಳೆ ದೇಹಕ್ಕೆ ಒತ್ತಡ ಹಾಕಿದಾಗ ಮಿದುಳು ಎಚ್ಚರಿಸುತ್ತದೆ. ಆ ಎಚ್ಚರಿಕೆಯನ್ನು ಕಡೆಗಣಿಸಿ ದೇಹಕ್ಕೆ ಮತ್ತೆ ಒತ್ತಡ ಹಾಕುವುದರಿಂದ ದೇಹದಲ್ಲಿರುವ ನೀರು ಕಡಿಮೆಯಾಗುವ ಬದಲು, ಆ ನೀರು ಹೆಚ್ಚಾಗುತ್ತದೆ. ಆಗ ನಮ್ಮ ಕೆಳಹೊಟ್ಟೆಯಲ್ಲಿ ಬೊಜ್ಜು ಹೆಚ್ಚಾದಂತೆ ಕಾಣುತ್ತದೆ‘ ಎಂದಿದ್ದಾರೆ.

ಅದು ಬರೀ ಕೊಬ್ಬು ಮಾತ್ರವಲ್ಲ. ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ನೀರು ಕೂಡ ಆಗಿರುತ್ತದೆ. ದೇಹಕ್ಕೆ ಹೆಚ್ಚು ಒತ್ತಡ ಹಾಕಿದಾಗ ಆ ಬೊಜ್ಜು ಜಾಸ್ತಿಯಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ದೇಹ ದಂಡಿಸುವ ಮೊದಲು ಅದರಿಂದ ಆಗುವ ಪರಿಣಾಮಗಳ ತಿಳಿದುಕೊಳ್ಳಬೇಕು’ ಎಂದು ಹೇಳಿಕೊಂಡಿದ್ದಾರೆ.

ಹೊಟ್ಟೆಯ ಭಾಗ ಸ್ವಲ್ಪ ದಪ್ಪಗಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ನಾನು ಕೂಡ ಹೊಟ್ಟೆಕೆಳಗಿನ ಬೊಜ್ಜು ಕರಗಿಸಲು ಹೋಗಿ ತುಂಬಾ ತೊಂದರೆ ಅನುಭವಿಸಿದ್ದೇನೆ. ಸಂತಾನೋತ್ಪತ್ತಿ ಅಂಗಗಳ ರಕ್ಷಣೆಗೆ ಮಹಿಳೆಯರ ಕೆಳಹೊಟ್ಟೆಯ ಭಾಗದಲ್ಲಿ ಸ್ವಲ್ಪ ನೀರು ಇರುವುದು ಒಳ್ಳೆಯದು ಎಂದು ನನಗೆ ವೈದ್ಯರು ಸಲಹೆ ನೀಡಿದ್ದರು. ಪ್ರತಿಯೊಬ್ಬರು ತೆಳುವಾಗಿ ಆಗಿ ಕಾಣಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ದೇಹ ಹೇಗಿದೆಯೋ ಹಾಗೆ ಒಪ್ಪಿಕೊಳ್ಳಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.