ಗುರುವಾರ , ನವೆಂಬರ್ 14, 2019
19 °C

ಮಹಿಳಾ ದಿನಕ್ಕೆ ತಾಪ್ಸಿ ಸಿನಿಮಾ

Published:
Updated:
Prajavani

ಮಹಿಳಾ ಪ್ರಧಾನ ಚಿತ್ರ ‘ತಾಪಡ್‌’ನಲ್ಲಿ ತಾಪ್ಸಿ ಪನ್ನು ವಿಭಿನ್ನವಾದ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆ್ಯಕ್ಷನ್‌ ಹಾಗೂ ಬೋಲ್ಡ್‌ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ತಾಪ್ಸಿ ಈಗ ಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ರತ್ನಾ ಪಾಠಕ್‌ ಶಾ, ಮನಯ್‌ ಕೌಲ್‌, ದಿಯಾ ಮಿರ್ಜಾ, ತನ್ವಿ ಅಜ್ಮಿ, ರಾಮ್‌ ಕಪೂರ್ ತಾರಾಗಣದಲ್ಲಿದ್ದಾರೆ. ಮಹಿಳೆ ಹಾಗೂ ಪುರುಷನ ನಡುವಿನ ಸಂಬಂಧದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಪತಿ–ಪತ್ನಿಯ ಸಂಬಂಧದೊಂದಿಗೆ ಲಿಂಗ ಸಮಾನತೆಯ ಪ್ರಶ್ನೆಯನ್ನು ಎತ್ತಲಾಗಿದೆ. 2020ರ ಮಾರ್ಚ್‌ ತಿಂಗಳಿನಲ್ಲಿ ಮಹಿಳಾ ದಿನಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

‘ಮುಲ್ಕ್‌’, ‘ಅಭೀ ತೋ ಪಾರ್ಟಿ ಶುರೂ ಹುಯೀ ಹೈ’ ಮತ್ತು ‘ಆರ್ಟಿಕಲ್‌ 15’ ಸಿನಿಮಾ ನಿರ್ದೇಶಿಸಿದ್ದ ಅನುಭವ್‌ ಸಿನ್ಹಾ ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್ ಹೇಳಲಿದ್ದಾರೆ. ಲಖನೌನಲ್ಲಿ ಚಿತ್ರೀಕರಣ ನಡೆಯಲಿದೆ.

‘ಮಹಿಳಾ ಪ್ರಧಾನ ಪಾತ್ರ ಸಿಗುವುದು ಅಷ್ಟು ಸುಲಭ ಅಲ್ಲ. ಇಂತಹ ಪಾತ್ರಗಳು ನಮ್ಮ ವೃತ್ತಿಗೆ ಗೌರವ ತಂದುಕೊಡುತ್ತವೆ. ಅನುಭವ್‌ ಅವರಿಂದ ನನಗೆ ಈ ಪಾತ್ರ ಸಿಕ್ಕಿದೆ. ತಾಪ್ಸಿ ಜೊತೆ ಕೆಲಸ ಮಾಡಲು ಖುಷಿಯಾಗಿದೆ’ ಎಂದು ದಿಯಾ ಮಿರ್ಜಾ ಟ್ವೀಟ್ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)