ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಬದುಕಿನ ಆರಂಭದಲ್ಲಿ ಸ್ಟಾರ್‌ ಪಟ್ಟಕ್ಕೇರಲು ನಟಿ ತಾಪ್ಸಿ ಮಾಡಿದ್ದೇನು?

Last Updated 5 ಡಿಸೆಂಬರ್ 2021, 11:13 IST
ಅಕ್ಷರ ಗಾತ್ರ

ಮುಂಬೈ: ದೊಡ್ಡ ನಟರೊಂದಿಗೆ ನಟಿಸಿದರೆ ಮಾತ್ರ ಸ್ಟಾರ್‌ ಪಟ್ಟಕ್ಕೇರಲು ಸಾಧ್ಯವೆಂದು ನನ್ನ ವೃತ್ತಿ ಬದುಕಿನ ಆರಂಭದಲ್ಲಿ ಹೇಳಿಕೊಡಲಾಗಿತ್ತು. ಆ ಕಾರಣ,ನಾನು ನನ್ನನ್ನು ಬದಲಾಯಿಸಿಕೊಳ್ಳಲು ತುಂಬಾ ಪ್ರಯತ್ನಿಸಿದೆ ಎಂದು ಬಾಲಿವುಡ್‌ ತಾರೆ ತಾಪ್ಸಿ ಪನ್ನು ಬಹಿರಂಗಪಡಿಸಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘‌ದೊಡ್ಡ ಬಜೆಟ್‌ ಚಿತ್ರಗಳಲ್ಲಿ ಕೆಲಸ ಮಾಡುವುದು,ದೊಡ್ಡ ನಟರೊಂದಿಗೆ ನಟಿಸುವುದು ಸ್ಟಾರ್ ಆಗುವ ಏಕೈಕ ಮಾರ್ಗವೆಂದು ಆರಂಭದಲ್ಲಿ ನನಗೆ ಹೇಳಿಕೊಡಲಾಗಿತ್ತು. ಆ ಹಿನ್ನೆಲೆಯಲ್ಲಿ ನಾನು ಸುಂದರವಾಗಿ ಕಾಣಲು, ಸ್ವಲ್ಪ ಅಮಾಯಕಿಯಾಗಿ ವರ್ತಿಸಲು ಶುರುಮಾಡಿದೆ. ನಾನು ನನ್ನನ್ನು ಬದಲಾಯಿಸಿಕೊಳ್ಳಲು ತುಂಬಾ ಪ್ರಯತ್ನಿಸಿದೆ. ಆದರೆ, ಅದು ನನಗೆ ಹೊಂದಾಣಿಕೆಯಾಗಲೇ ಇಲ್ಲ‘ ಎಂದು ತಾಪ್ಸಿ ಹೇಳಿದ್ದಾರೆ.

‘ಹಿಂದಿ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ ನಂತರ ಈ ತಪ್ಪುಗಳ ಪುನರಾವರ್ತನೆ ಆಗದಂತೆ ನೋಡಿಕೊಂಡಿದ್ದೇನೆ‘ ಎಂದೂ ತಾಪ್ಸಿ ತಿಳಿಸಿದ್ದಾರೆ.

ಬಾಲಿವುಡ್‌ಗೆ ಕಾಲಿಡುವ ಮೊದಲು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿತಾಪ್ಸಿ ಕಾಣಿಸಿಕೊಂಡಿದ್ದರು. ಪಂಜಾಬ್‌ ಮೂಲದ ತಾಪ್ಸಿ ತೆಲುಗಿನ ‘ಜುಮ್ಮಂಡಿ ನಾದಂ’ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT